ಮೇ 10 ರಿಂದ ಮೇ 24 ರ ವರೆಗೆ ಕರ್ನಾಟಕ ಕಂಪ್ಲೀಟ್ ಲಾಕ್ ಡೌನ್ | ಲಾಕ್ ಲಾಕ್ ಲಾಕ್ ಡೌನ್ !!

ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮೇ 10ರಿಂದ ಮೇ 24ರ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ದಿನಾಂಕ ಮೇ 10 ರಿಂದ ಬೆಳಗ್ಗೆ 6 ಗಂಟೆಯಿಂದ ಮೇ 24 ರವರೆಗೆ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗುತ್ತಿದೆ. ಈ ಅವಧಿಯಲ್ಲಿ ಅಂಗಡಿ, ಬಾರ್, ಹೊಟೇಲ್, ಪಬ್ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಹಾರ, ಹಾಲು, ತರಕಾರಿ ಮಾರಾಟಕ್ಕೆ ಅನುಕೂಲುವಾಗುವಂತೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಹಾಲಿನ ಅಂಗಡಿಗಳು ಸಂಜೆ 6 ಗಂಟೆಯವರೆಗೆ ತೆರೆದಿರಲು ಅವಕಾಶ ನೀಡಲಾಗಿದೆ. ತಳ್ಳೋ ಗಾಡಿಯಲ್ಲಿ ಕೂಡ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆಸ್ಪತ್ರೆಗೆ ಹೋಗುವುದಕ್ಕೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತು ಕೊಂಡೊಯ್ಯೋದಕ್ಕೆ ಅವಕಾಶ ನೀಡಲಾಗಿದೆ ಎಂದರು.

ಮಾರ್ಗಸೂಚಿ:

ವಿಮಾನ, ರೈಲು ಸಂಚಾರ, ಅಂತರ ರಾಜ್ಯ ಸರಕು ಸೇವೆ, ಆಸ್ಪತ್ರೆ, ಔಷಧಾಲಯ, ಹಾಲು ಸಹಿತ ತುರ್ತು ಅಗತ್ಯ ಸೇವೆ ಅಭಾದಿತ. ಕಟ್ಟಡ ನಿರ್ಮಾಣ ಮತ್ತು ರಸ್ತೆ ಕಾಮಗಾರಿಗಳಿಗೆ ಅವಕಾಶ. ಹೊಟೇಲ್/ಮದ್ಯ ಪಾರ್ಸಲ್ ಸೇವೆಗೆ ಅವಕಾಶ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಅವಕಾಶ. ಹಾಲಿನ ಬೂತ್‍ಗಳು ಹಾಗೂ ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಅವಕಾಶ ನೀಡಲಾಗಿದೆ.

ಏನಿರುವುದಿಲ್ಲ ?

ಮೆಟ್ರೋ, ಕೆಎಸ್ಸಾಟಿಸಿ, ಬಿಎಂಟಿಸಿ ಸೇರಿ ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಬಸ್‍ಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದೆ. ಟ್ಯಾಕ್ಸಿ, ಕ್ಯಾಬ್ ಸಹಿತ ಆಟೋರಿಕ್ಷಾಗಳಿಗೆ ಅನುಮತಿಯೊಂದಿಗೆ ತುರ್ತು ಸಂದರ್ಭಗಳಲ್ಲಿ ಸಂಚಾರಕ್ಕೆ ಅವಕಾಶ. ಮೇ 10ರ ನಂತರ ಮದುವೆ ಸೇರಿದಂತೆ ಸಭೆ- ಸಮಾರಂಭಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈಗಾಗಲೇ ನಿಗದಿ ಆಗಿರುವ ಮದುವೆಗಳಿಗೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಗಡಿ ಭಾಗಗಳನ್ನು ಸಂಪೂರ್ಣ ಬಂದ್. ಚಿತ್ರಮಂದಿರ, ಮಾಲ್‍ಗಳು ಸೇರಿದಂತೆ ವ್ಯಾಪಾರ ವಹಿವಾಟು ಸಂಪೂರ್ಣ ನಿರ್ಬಂಧ.

5 Comments
  1. MichaelLiemo says

    ventolin 90 mcg: Buy Albuterol inhaler online – ventolin 100mcg online
    ventolin 100mcg online

  2. Josephquees says

    lasix medication: furosemide online – furosemida 40 mg

  3. Josephquees says

    furosemide: cheap lasix – lasix generic name

  4. Timothydub says

    mexican mail order pharmacies: buying prescription drugs in mexico – mexico drug stores pharmacies

  5. Timothydub says

    mexican rx online: mexican rx online – medicine in mexico pharmacies

Leave A Reply

Your email address will not be published.