Ad Widget

ಒಂದೇ ಊರು ಇಬ್ಬರ ಹೆಸರು ಒಂದೇ, ಕೊರೊನಾ ಪಾಸಿಟಿವ್ ಒಬ್ಬ,ಇನ್ನೊಬ್ಬನನ್ನು ಹುಡುಕಾಡಿದ ಆರೋಗ್ಯ ಇಲಾಖಾ ಸಿಬಂದಿ

ಕಡಬ : ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು   ಬಿಟ್ಟು ಅದೇ ಹೆಸರಿನ  ಇನ್ನೊಬ್ಬ ವ್ಯಕ್ತಿಯ ಹಿಂದೆ ಸಿಬ್ಬಂದಿ ಅಲೆದಾಡಿದ ಪ್ರಸಂಗ ಕಡಬ ತಾಲೂಕಿನ ಕಲ್ಲುಗುಡ್ಡೆ ಸಮೀಪದ ರೆಂಜಿಲಾಡಿಯಲ್ಲಿ ನಡೆದಿದೆ.

ವ್ಯಕ್ತಿಯೊಬ್ಬರ ಕೊರೊನಾ ವರದಿಯು ಪಾಸಿಟಿವ್ ಬಂದ ಹಿನ್ನೆಲೆ ಅವರನ್ನು ಹೋಂ ಐಸೋಲೇಷನ್ ನಲ್ಲಿ ಇರುವಂತೆ ಸೂಚಿಸಲು  ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದರು. ಪಾಸಿಟಿವ್ ಬಂದ ವ್ಯಕ್ತಿಯ ಫೋನ್​  ಸಂಪರ್ಕ ಸಿಗದ ಕಾರಣ ಸಿಬ್ಬಂದಿ, ಸ್ಥಳೀಯರಲ್ಲಿ ಆ ವ್ಯಕ್ತಿಯ ಬಗ್ಗೆ ವಿಚಾರಿಸಿದ್ದಾರೆ. ಆಗ ಸ್ಥಳೀಯರು ತಪ್ಪಾಗಿ ಅರ್ಥೈಸಿಕೊಂಡು ಅದೇ ಹೆಸರಿನ ರೆಂಜಿಲಾಡಿಯಲ್ಲಿ ಉದ್ಯಮ ನಡೆಸುವ ಇನ್ನೊಬ್ಬ ವ್ಯಕ್ತಿಯ ಮಾಹಿತಿ ನೀಡಿದ್ದಾರೆ.

 ಈ ಹಿನ್ನೆಲೆಯಲ್ಲಿ ನಿಜವಾದ ಕೊರೊನಾ ಪಾಸಿಟಿವ್ ವ್ಯಕ್ತಿಯನ್ನು ಬಿಟ್ಟು ಅಧಿಕಾರಿಗಳು ಕೊರೊನಾ ತಪಾಸಣೆಯೇ ಮಾಡಿಸದ ಸ್ಥಳೀಯ ಬೇರೆ ವ್ಯಕ್ತಿಯ ಹಿಂದೆ ಅಡ್ಡಾಡಿದ್ದಾರೆ. ಆದರೆ ಈತ ಕೊರೊನಾ ಟೆಸ್ಟ್​ಗೆ ಸ್ಯಾಂಪಲ್​ ಕೊಟ್ಟಿರಲಿಲ್ಲ. ಬಳಿಕ ನಿಜವಾಗಿ ಪಾಸಿಟಿವ್ ಬಂದಿರುವ ವ್ಯಕ್ತಿ ಸಿಕ್ಕ ಬಳಿಕ, ಇನ್ನೊಬ್ಬ ವ್ಯಕ್ತಿ ಸಂಕಷ್ಟದಿಂದ ಪಾರಾಗಿದ್ದಾರೆ.

Ad Widget Ad Widget Ad Widget

ಇನ್ನು ಸಿಬ್ಬಂದಿಯ ಮಾಹಿತಿಯಿಂದ ಸ್ಥಳೀಯರು ಪಾಸಿಟಿವ್ ಬರದ ವ್ಯಕ್ತಿಗೆ ಫೋನ್ ಮಾಡಿ, ಅಂಗಡಿ ಬಾಗಿಲು ತೆರೆದಿರುವುದಕ್ಕೆ  ಗಲಾಟೆ ಮಾಡಿದ್ದರು.  ಆದ್ರೆ ಬಳಿಕ ಸತ್ಯ ಗೊತ್ತಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.   .ತಪಾಸಣೆ ಸಮಯದಲ್ಲಿ ವಿಳಾಸ ಸಹಿತ ಎಲ್ಲಾ ಮಾಹಿತಿಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗುತ್ತದೆ. ನಂತರವೂ ಈ ತರಹ ಎಡವಟ್ಟುಗಳು ಯಾಕೆ ಆಗುತ್ತಿದೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: