ಪರಿಸ್ಥಿತಿ ಹೀಗೆ ಮುಂದುವರಿದರೆ ವ್ಯವಸ್ಥೆ ಕಠಿಣವಾಗಲಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಲಾಕ್ ಡೌನ್ ವಿಫಲ ಆಗಬಾರದು ಅನ್ನೋದು ನಮ್ಮ ಬಯಕೆಯಾಗಿದೆ.ಲಾಕ್ ಡೌನ್ ಯಶಸ್ವಿಗೊಳಿಸಲು ಎಲ್ಲರೂ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ಶಾಸಕರು ಮಂತ್ರಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕೊರೋನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಲೇ ಇದೆ.
ಪ್ರಕರಣಗಳ ಸಂಖ್ಯೆ ಹೀಗೇ ಮುಂದುವರಿದರೆ ವ್ಯವಸ್ಥೆಯನ್ನು ಕಠಿಣಗಳಿಸಬೇಕಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಉಡುಪಿಯಲ್ಲಿ ಮಾತನಾಡಿದ ಸಚಿವರು ,ಕೊರೋನಾ ನಿಯಂತ್ರಣಕ್ಕೆ ಸಿಎಂ ಕಠಿಣ ಕ್ರಮ ಕೈಗೊಂಡಿದ್ದಾರೆ.
ಎಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ.
ಎಲ್ಲೆಡೆ ಲಾಕ್ ಡೌನ್ ಪಾಲನೆ ಕುರಿತು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ ಎಂದ ಅವರು, ಸಮಯ ನಿಗದಿ, ಅಧಿಕಾರಿಗಳ ಬಳಕೆ, ಪಾಸಿಟಿವ್ ರೋಗಿಗಳ ಆಸ್ಪತ್ರೆ ಸೇರ್ಪಡೆ ಗೆ ಸೂಚನೆ ನೀಡಿದ್ದಾರೆ.ಜನರು ಮನೆಯೊಳಗೆ ಇದ್ದುಕೊಂಡು ಕರ್ಫ್ಯೂ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ಸಚಿವ ಸುಧಾಕರ್ ಹೇಳಿಕೆಗೆ ಕೋಟ ಪ್ರತಿಕ್ರಿಯೆ ನೀಡಿದ್ದು,ಅಗತ್ಯ ವಸ್ತುಗಳ ಖರೀದಿಗೆ 10 ಗಂಟೆಯವರೆಗೆ ಮಾತ್ರ ಸಮಯವಕಾಶ ಇದೆ.
ಆದರೆ ಜನ ಹತ್ತು ಗಂಟೆಯ ನಂತರ ಓಡಾಟ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸುಧಾಕರ್ ಹೇಳಿಕೆ ನೀಡಿದ್ದಾರೆ.ಹತ್ತು ಗಂಟೆಯ ನಂತರ ಹೊರಗಡೆ ಓಡಾಡುವುದು ಸರಿಯಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಸಮಯ ಸೀಮಿತ ಗೊಳಿಸುವ ಬಗ್ಗೆ ಸಿಎಂ ಮತ್ತು ಆರೋಗ್ಯ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.