ಕೃಷಿಸಂಜೀವಿನಿ ಯೋಜನೆಯ ಸೌಲಭ್ಯ ಪಡೆಯಲು ಸೂಚನೆ
ಕೃಷಿಕರಿಗೆ ಕೃಷಿ ಸಮಸ್ಯೆಗೆ ಪರಿಹಾರ ಪಡೆಯಲು ಅನುಕೂಲವಾಗುವಂತೆ ಕೃಷಿ ಸಂಜೀವಿನಿ ಎಂಬ ನೂತನ ಯೋಜನೆಯು ಜಾರಿಗೆ ಬಂದಿದೆ.
ರೈತರು ತಮ್ಮ ಜಮೀನಿನಲ್ಲಿ ಮಣ್ಣು ಪರೀಕ್ಷೆ, ಕೀಟ ಮತ್ತು ರೋಗಗಳು ಸೇರಿದಂತೆ ಮತ್ತಿತರ ಸಮಸ್ಯೆಗಳು ಕಂಡು ಬಂದಲ್ಲಿ ಉಚಿತ ಸಹಾಯ ವಾಣಿ ಸಂಖ್ಯೆ: 155313ಕ್ಕೆ ಕರೆ ಮಾಡಿದಲ್ಲಿ ತಮ್ಮ ಜಮೀನಿಗೆ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯದ ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ.
ಸಹಾಯವಾಣಿ ಸಂಖ್ಯೆ ಸಂಪರ್ಕ ಸಿಗದಿದ್ದಲ್ಲಿ ದೂ.ಸಂ: 0824-243602/2423604ಗೆ ಕರೆ ಮಾಡಿ ರೈತರು ಸದುಪಯೋಗ ಪಡೆಯುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.