ಧರ್ಮಸ್ಥಳದಲ್ಲಿ ಕೊರೋನಾಗೆ ಮತ್ತೊಂದು ಬಲಿ

ಧರ್ಮಸ್ಥಳ ಗ್ರಾಮದ ಓರ್ವ ವ್ಯಕ್ತಿ ಕೊರೋನಾ ಗೆ ಬಲಿಯಾಗಿದ್ದಾರೆ.

ಮೂಲತಹ ಬಿಜಾಪುರ ಮೂಲದ ಪರಸಪ್ಪ ಎಂಬ 45 ವರ್ಷದ ವ್ಯಕ್ತಿಯೇ ಈಗ ಮೃತಪಟ್ಟವರು.

ಬಿಜಾಪುರ ಮೂಲದ ಈ ವ್ಯಕ್ತಿ ತಮ್ಮ ಕುಟುಂಬದೊಂದಿಗೆ ಕನ್ಯಾಡಿಯಲ್ಲಿ ವಾಸವಾಗಿದ್ದರು. ಅವರು ಧರ್ಮಸ್ಥಳ ಕೆಎಸ್ಆರ್ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಅವರಿಗೆ ಎರಡು ವಾರಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಅವರು ಮನೆಯಲ್ಲಿದ್ದುಕೊಂಡೆ ಹೋಂ ಕ್ವಾರಂಟೈನ್ ಆಗಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ನಿನ್ನೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಕಾರಣ ಅವರ ನಿವಾಸಕ್ಕೆ ಅಂಬುಲೆನ್ಸ್ ಬಂದಿತ್ತು. ಅವರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವಅವರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿ ಪರಸಪ್ಪ ಪರಲೋಕ ಸೇರಿದ್ದಾರೆ.

Leave A Reply

Your email address will not be published.