ಧರ್ಮಸ್ಥಳ ಸೊಸೈಟಿ ಸಿಇಓ ರವೀಂದ್ರನ್ ಆತ್ಮಹತ್ಯೆ | ಸಂಸ್ಥೆಯ ಒಳಗೆ ದೊಡ್ಡಮಟ್ಟದ ಮೋಸದಾಟದ ಶಂಕೆ | ತನಿಖೆಗೆ ಮಾಜಿ ಶಾಸಕ ವಸಂತ ಬಂಗೇರ ಆಗ್ರಹ

ಧರ್ಮಸ್ಥಳ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಸಂಸ್ಥೆಯೊಳಗೆ ನಡೆದ ಹಣಕಾಸಿನ ಮೋಸದಾಟ ಅವರ ಆತ್ಮಹತ್ಯೆಗೆ ಕಾರಣವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

 

ಆತ್ಮಹತ್ಯೆಗೂ ಮುನ್ನ ಇನ್ನು ಧರ್ಮಸ್ಥಳ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಅವರು ಡೆತ್ ನೋಟ್ ಬರೆದಿದ್ದಾರೆ.

ಏನಿದೆ ಡೆತ್ ನೋಟ್ ನಲ್ಲಿ ?

ಅಧ್ಯಕ್ಷರು ಸೋಲಲು ನಾನು ಬಿಡುವುದಿಲ್ಲ. ಮೋಸದಿಂದ ಅಧ್ಯಕ್ಷರ ಮೇಲೆ ಒತ್ತಡ ಹೇರಿದ ಜಯರಾಮ ಭಂಡಾರಿ ಮತ್ತರಘುಚಂದ್ರ ಅವರನ್ನು ನಾನು ಕ್ಷಮಿಸುವುದಿಲ್ಲ.
ನನ್ನ ಮಗಳಿಗೆ ಕ್ಲಾರ್ಕ್ ಕೆಲಸ ಕೊಡಿಸಿ. ಬೋಲಿಯಾರಿನಲ್ಲಿ 0.12 ಎಕರೆ ಮತ್ತು ಪಾಲಿನಲ್ಲಿ ಎರಡು ಎಕರೆ ಆಸ್ತಿ ಬರಲಿಕ್ಕೆ ಇದೆ ಅದನ್ನು ಕೂಡ ಕೊಡಿಸಿ. ಎಂದು ಬರೆದಿದ್ದಾರೆ.
ಇಡೀ ಜೀವನವನ್ನು ಸಂಘಕ್ಕಾಗಿ ಮೀಸಲಿಟ್ಟ ನಾನು ಅಂತ್ಯಕಾಲದಲ್ಲಿ ಮುಟ್ಟಾಳರಿಂದ ಅವಮಾನಿತನಾಗಲು ಬಯಸುವುದಿಲ್ಲ.  ಸಹೋದ್ಯೋಗಿಗಳಿಗೆ ಶುಭಾಶಯಗಳು. ಶತ್ರುಗಳನ್ನು ಸುಮ್ಮನೆ ಬಿಡೋದಿಲ್ಲ ಎಂದು ಬರೆದಿದ್ದಾರೆ.

ಇನ್ನುಈ ಡೆತ್ ನೋಟಿನಲ್ಲಿ ಮುಖ್ಯವಾಗಿ ಧರ್ಮಸ್ಥಳ ಸೇವಾ ಸಹಕಾರಿ ಸಂಘದ ಡೈರೆಕ್ಟರುಗಳಾದ ಜಯರಾಮ್ ಭಂಡಾರಿ ಮತ್ತು ರಘುಚಂದ್ರ ಇವರ ಹೆಸರು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಸ್ವರ್ಣಗೌರಿ ಎಂಬ ಓರ್ವ ಮಹಿಳೆಯ ಹೆಸರನ್ನು ಅವರು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಮೋಸದಿಂದ ಅಧ್ಯಕ್ಷರ ಮೇಲೆ ಒತ್ತಡ ಹೇರಿದ ಇವರನ್ನು ಕ್ಷಮಿಸುವುದಿಲ್ಲ ಎಂದು ಬರೆದಿದ್ದಾರೆ. ಯಾವ ರೀತಿಯ ಮೋಸ ಎನ್ನುವ ಬಗ್ಗೆ ಇಲ್ಲಿ ಯಾವುದೇ ಪ್ರಸ್ತಾಪ ಇಲ್ಲ.
ಶತ್ರುಗಳನ್ನು ಸುಮ್ಮನೇ ಬಿಡುವುದಿಲ್ಲ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದು ಅರ್ಥವಾಗುತ್ತಿಲ್ಲ.
ಮೇಲ್ನೋಟಕ್ಕೆ ತೋರಿಬರುವ ವಿಷಯ ಏನೆಂದರೆ ಸಂಸ್ಥೆಯ ಒಳಗೆ ಆಂತರಿಕ ಜಗಳ ವೈಮನಸ್ಸು ಇತ್ತು. ಸಾಮಾನ್ಯವಾಗಿ ಹಣಕಾಸಿನ ಸಂಸ್ಥೆಗಳಲ್ಲಿ ಹಣಕಾಸಿನ ವಿಚಾರಕ್ಕಾಗಿ ವೈಮನಸ್ಸು ಉಂಟಾಗುತ್ತಿದ್ದು, ಸಂಸ್ಥೆಯ ಒಳಗೆ ದೊಡ್ಡಪ್ರಮಾಣದಲ್ಲಿ ಮೋಸದಾಟ ನಡೆದಿರುವ ಸಾಧ್ಯತೆ ಇದೆ.

ನ್ಯಾಯಯುತ ತನಿಖೆಗೆ ಮಾಜಿ ಶಾಸಕ ಕೆ ವಸಂತ ಬಂಗೇರ ಆಗ್ರಹ

ರವೀಂದ್ರನ್ ಡಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಆಡಳಿತ ಸಮಿತಿಯ ಮಾನಸಿಕ ಕಿರುಕುಳವೇ ಕಾರಣವಾಗಿದ್ದು ಈ ಬಗ್ಗೆ ಉನ್ನತಮಟ್ಟದ, ನ್ಯಾಯ ಸಮ್ಮತವಾದ ತನಿಖೆ ನಡೆಸಬೇಕೆಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಒತ್ತಾಯಿಸಿದ್ದಾರೆ.

ಅವರು ಇಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಮೇ.4 ರಂದು ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ನೇತೃತ್ವದ ಆಡಳಿತ ಮಂಡಳಿಯು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಅವರಿಗೆ ಮಾನಸಿಕ ಕಿರುಕುಳ ನೀಡಿ ಒತ್ತಾಯಪೂರ್ವಕವಾಗಿ ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಬಿಜೆಪಿ ಸದಸ್ಯರಿಗೆ ಬೇಕಾಬಿಟ್ಟಿಯಾಗಿ ಸಾಲ ಕೊಡಿಸಿದ್ದಾರೆ. ಅಲ್ಲದೆ ಮತ್ತಷ್ಟು ನೀಡಲು ಿದ್ದರು. ಅದಕ್ಕೆ ಒಪ್ಪದಿದ್ದಾಗ ಬಲತ್ಕಾರವಾಗಿ ರಾಜೀನಾಮೆ ಕೊಡಿಸಿರುವುದೇ ಈ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಮಾಜಿ ಶಾಸಕ ವಸಂತ ಬಂಗೇರ ಅವರು ಆರೋಪಿಸಿದ್ದಾರೆ.

ಕಳೆದ 3-4 ವರ್ಷಗಳಿಂದ ಸಹಕಾರಿ ಸಂಘದ ನಿಯಾಮಾವಳಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಆಡಳಿತ ಮಂಡಳಿ ಸದಸ್ಯರಿಗೆ ಸಾಲ ನೀಡುವ ಮೂಲಕ ಆಡಳಿತ ಮಂಡಳಿಯು ವ್ಯಾಪಕವಾಗಿ ಭ್ರಷ್ಟಚಾರ ನಡೆಸಿದ್ದು, ಈ ಬಗ್ಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ದ.ಕ. ಜಿಲ್ಲಾ ಸಹಕಾರಿ ಉಪನಿಬಂಧಕರ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಯನ್ನು ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದಿದ್ದಾರೆ.

Leave A Reply

Your email address will not be published.