‘ ಮೋದಿಯವರೇ, 2000 ದಲ್ಲಿ ಗುಜರಾತಿನಲ್ಲಿ ನೀವು ತೋರಿದ ವಿರಾಟ್ ರೂಪವನ್ನು ಬಂಗಾಳದಲ್ಲಿ ತೋರಿಸಿ ‘ | ಕಂಗನಾ ಟ್ವೀಟ್ ಬ್ಲಾಕ್ ಆಯ್ತು !
ಸದಾ ವಿವಾದದ ಮೂಲಕವೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ, ಕಂಗನಾ ರಾಣಾವತ್ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾಳೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರ ಹಿಂಸಾಚಾರ ಭುಗಿಲೆದ್ದಿದ್ದು, ಬಿಜೆಪಿ ಕಾರ್ಯಕರ್ತರ ಮನೆ ಹಾಗೂ ಕಚೇರಿ ಧ್ವಂಸ ಮಾಡಲಾಗಿದೆ. ಘಟನೆಯಲ್ಲಿ 10 ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿದ್ದ ಕಂಗನಾ ರಾಣಾವತ್, ಮೋದಿಯವರು ಗುಜರಾತಿನಲ್ಲಿ 2000 ಇಸವಿಯಲ್ಲಿ ಮೋದಿಯವರು ಗುಜರಾತಿನಲ್ಲಿ ತೋರಿದ ವಿರಾಟ್ ರೂಪವನ್ನು ಈಗ ಪಶ್ಚಿಮ ಬಂಗಾಳದಲ್ಲಿ ತೋರಿಸಿ ಮೋದಿಯವರೇ ಎಂದು ಆಕೆ ಟ್ವೀಟ್ ಮಾಡಿದ್ದರು.
ಟ್ವಿಟ್ಟರ್ ವಕ್ತಾರರು ಹೇಳಿದ್ದೇನು?
ಈ ಕುರಿತು ಟ್ವಿಟ್ಟರ್ ವಕ್ತಾರರು ಪ್ರತಿಕ್ರಿಯೆ ನೀಡಿದ್ದು, “ಹಿಂಸಾಚಾರಕ್ಕೆ ಪುಷ್ಟಿಕೊಡುವ ನಡವಳಿಕೆ ಮೇಲೆ ನಾವು ಕಠಿಣ ಕ್ರಮ ಕೈಗೊಳ್ಳುವುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಟ್ವಿಟ್ಟರ್ ನಿಯಮಗಳನ್ನು ಪದೇ ಪದೇ ಉಲ್ಲಂಘನೆ ಮಾಡಿದ್ದಕ್ಕಾಗಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಅಕೌಂಟ್‌ನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲಾಗಿದೆ. ನಮ್ಮ ಸೇವೆ ಬಳಸುತ್ತಿರುವ ಪ್ರತಿಯೊಬ್ಬರಿಗೂ ನಾವು ಟ್ವಿಟರ್ ನಿಯಮಗಳನ್ನು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿ ಮಾಡುತ್ತೇವೆ” ಎಂದಿದ್ದಾರೆ.
ಮುಸ್ಲಿಮರ ರಂಝಾನ್ ತಿಂಗಳಲ್ಲಿ ಲಾಕ್ ಡೌನ್ ಮಾಡಿ ಎಂದು ಈ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದಳು ಕಂಗನಾ.
ಇದೀಗ ಕಂಗನ ತಮ್ಮ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿದ ನಂತರ ಇನ್ಸ್ಟಾಗ್ರಾಮ್ ಗೆ ಬಂದು ಕಣ್ಣೀರು ಹಾಕಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ವ್ಯಾಪಕ ಹಿಂಸಾಚಾರ ಹತ್ಯೆಗಳು ಮತ್ತು ಅತ್ಯಾಚಾರಗಳು ನಡೆಯುತ್ತಿವೆ. ಅದನ್ನು ಯಾವ ಮಾಧ್ಯಮಗಳು ಕೂಡ ಪ್ರಶ್ನಿಸುತ್ತಿಲ್ಲ. ಎಂದು ಆಕೆ ಕಣ್ಣೀರು ಹಾಕಿದ್ದಾರೆ.