ವೈದ್ಯಕೀಯ ಆಮ್ಲಜನಕ ನಿರ್ವಹಣೆಗೆ ಸಂಬಂಧಿಸಿ ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಕೋವಿಡ್ 19 ನಿಯಂತ್ರಣ ಸಂಬಂಧ ವೈದ್ಯಕೀಯ ಆಮ್ಲಜನಕ ನಿರ್ವಹಣೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಇವತ್ತಿನ ರಾಜ್ಯ ಸರ್ಕಾರದ ಆದೇಶದನ್ವಯ “ಎಲ್ಲಾ ಜಿಲ್ಲೆಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಮ್ಲಜನಕ ರೀಫಿಲ್ಲಿಂಗ್ ಏಜೆನ್ಸಿಗಳು ಈ ಕೆಳಗಿನ ವಿವರಗಳನ್ನು ಪ್ರತಿದಿನ ಒದಗಿಸಬೇಕು.

ತಮ್ಮಲ್ಲಿರುವ ಒಟ್ಟು ಆಮ್ಲಜನಕದ ರಶೀದಿ, ತಾವು ಮಾಡಿದ ಸರಬರಾಜು, ಪಡೆದುಕೊಂಡ ಆಮ್ಲಜನಕದ ವಿವ  ಮತ್ತು ದಿನದ ಕೊನೆಗೆ ಉಳಿದ ( ಕ್ಲೋಸಿಂಗ್ ಬ್ಯಾಲೆನ್ಸ್) ಆಮ್ಲಜನಕದ ವಿವರವನ್ನು ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿಗೆ ಪ್ರತಿದಿನ ಒದಗಿಸಬೇಕು.”

ರೀಫಿಲ್ಲಿಂಗ್ ಕೇಂದ್ರಗಳ ಉಸ್ತುವಾರಿಗೆ ತಹಶೀಲ್ದಾರ್ ಶ್ರೇಣಿಗಿಂತ ಒಂದು ಹಂತ ಕೆಳಗಿರುವ ಓರ್ವ ಅಧಿಕಾರಿಯನ್ನು ನೇಮಿಸಿ ಹತ್ತಿರದಿಂದ ನೀನ್ ಉಸ್ತುವಾರಿ ಮಾಡಲು ಸೂಚಿಸಲಾಗಿದೆ.

https://mobile.twitter.com/ANI/status/1389147611228086272/photo/2

https://mobile.twitter.com/ANI/status/1389147611228086272/photo/2

Leave A Reply

Your email address will not be published.