ಗಡಾಯಿಕಲ್ಲು ಗಡ ಗಡ | ಅಪಾಯದಲ್ಲಿದೆಯಾ ನರಸಿಂಹ ಗಡ ?
ದಕ್ಷಿಣಕನ್ನಡ ಜಿಲ್ಲೆಯ ಗಡಾಯಿಕಲ್ಲು ಬೆಟ್ಟದಲ್ಲಿ ಬಿರುಕು ಬಿಟ್ಟಿದ್ದು, ಬೆಟ್ಟದ ಒಂದು ಪಾರ್ಶ್ವದಲ್ಲಿ ಗುಡ್ಡದ ಮಣ್ಣು ಕುಸಿದು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಲ್ಲಿನ ಸ್ಥಳೀಯರ ಮಾಹಿತಿ ಪ್ರಕಾರ ಈ ಪರಿಸರದಲ್ಲಿ ಸ್ಪೋಟದ ಭಾರೀ ಶಬ್ದ ಕೇಳಿಸಿಕೊಂಡಿದೆ ಎನ್ನಲಾಗಿದೆ.
ಚಾರಣಪ್ರಿಯರ ಹಾಟ್ ಸ್ಪಾಟ್ ಆಗಿರುವ ಬೆಳ್ತಂಗಡಿಯ ಈ ಪ್ರವಾಸಿತಾಣ ನರಸಿಂಹಗಢ ಎಂದೂ ಕರೆಯಲ್ಪಡುತ್ತದೆ. ಭೂಮಿಯಿಂದ 1700 ಅಡಿ ಎತ್ತರದಲ್ಲಿರುವ ನರಸಿಂಹಗಡ ಗಡಾಯಿಕಲ್ಲಿನಲ್ಲಿ ಭಾರೀ ಶಬ್ಧ ಕೇಳಿಬಂದಿದ್ದು,ಕಲ್ಲಿನ ಒಂದು ಪಾರ್ಶ್ವದಲ್ಲಿ ಕುಸಿತವಾಗಿದೆ ಎಂದು ಹೇಳಲಾಗಿದೆ.
ಕಳೆದ ವರ್ಷವೂ ಇದೇ ರೀತಿಯಲ್ಲಿ ಶಬ್ದವು ಕೇಳಿಸಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಳ್ತಂಗಡಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಈ ಗಡಾಯಿಕಲ್ಲು ಭೂಮಿಯಿಂದ ನೂರಾರು ಅಡಿ ಎತ್ತರದಲ್ಲಿರುವ ಈ ಪರ್ವತವು ಪ್ರಸಿದ್ದ ಪ್ರವಾಸಿ ತಾಣ ಮತ್ತು ಟ್ರಕ್ಕಿಂಗ್ ಸ್ಪಾಟ್ ಆಗಿಯೂ ಗುರುತಿಸಿಕೊಂಡಿದೆ.
ಮೊದಲು ಹಿಂದೂ ರಾಜರುಗಳ ಕೋಟೆಯಾಗಿದ್ದ ನರಸಿಂಹ ಗಢಕ್ಕೆ 1794ರಲ್ಲಿ ಟಿಪ್ಪುಸುಲ್ತಾನ್ ದಾಳಿ ಮಾಡಿ ವಶ ಪಡಿಸಿಕೊಂಡ ಬಳಿಕ ಜಮಾಲಾಬಾದ್ ಕೋಟೆ ಎಂದು ಮರುನಾಮಕರಣ ಮಾಡಿದ್ದ. ನರಸಿಂಹ ಗಢದಲ್ಲಿ ಇಂದಿಗೂ ಟಿಪ್ಪು ಸುಲ್ತಾನ್ ಕಾಲದ ಫಿರಂಗಿಗಳು ಕಾಣಸಿಗುತ್ತಿದ್ದು,ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಈಗ ಇಲ್ಲಿ ಸ್ಫೋಟದ ಸದ್ದು ಕೇಳಿಬಂದಿದ್ದು ಒಂದು ಕಡೆ ಆತಂಕಕ್ಕೂ ಮತ್ತೊಂದು ಕಡೆ ಕುತೂಹಲಕ್ಕೆ ಕಾರಣವಾಗಿದೆ.
Thats not narsimah gada k ..
Correct it first …
Godi media