Ad Widget

ಲಾಕ್ ಡೌನ್ ನಡುವೆಯೇ ಮಸಾಜ್ ಸೆಂಟರ್ ಹೆಸರಿನಲ್ಲಿ ಮಾಂಸ ಧಂದೆ, ಯುವತಿ ಸೇರಿ ಇಬ್ಬರ ಬಂಧನ

ದೇಶ ಮತ್ತು ಇಡೀ ರಾಜ್ಯ ಕೋರೋನಾದಿಂದ ತತ್ತರಿಸಿಹೋಗಿದ್ದು, ಮಾಸ್ಕ್ ಮತ್ತು ಸಾಮಾಜಿಕ ಅಂತರ ಎಂದು ಬೊಬ್ಬೆ ಹೊಡೆಯುತ್ತಿದ್ದರೆ ಅಲ್ಲೊಂದು ಕಡೆ ಮೈ ಮಸಾಜ್ ತಿಕ್ಕುವ ಜತೆಗೆ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ.

ಇದು ನಡೆದದ್ದು ಮೈಸೂರು ನಗರದ ಹೊರವಲಯದಲ್ಲಿರುವ ವಿಜಯನಗರದಲ್ಲಿ. ಅಲ್ಲಿನ ಮಸಾಜ್ ಸೆಂಟರ್‌ ಮೇಲೆ ದಾಳಿ ಮಾಡಿದ ಪೊಲೀಸರು, ಯುವತಿ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ವಿಜಯ ನಗರದ ವಾಟರ್ ಟ್ಯಾಂಕ್ ಬಳಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಮಸಾಜ್ ಸೆಂಟರ್ ಹೆಸರಿನ ಅಡ್ಡೆಯ ಮೇಲೆ ಮೇಲೆ ಡಿಸಿಪಿ ಪ್ರಕಾಶ್‌ಗೌಡ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು.
ಅಲ್ಲಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ. ಕೊರೊನಾ ಕರ್ಪೂ ಇದ್ದರೂ ಕೂಡ ಆ ಸೆಂಟರ್‌ ತೆರೆಯಲಾಗಿದ್ದ ಕಾರಣ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ದೊರೆತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದಾಗ ಮಸಾಜ್ ಸೆಂಟರ್ ಇನ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಗುಟ್ಟು ಬಯಲಾಗಿದೆ. ಈ ಸಂಬಂಧ ಇಬ್ಬರನ್ನು ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಇದರ ಮುಖ್ಯ ಆರೋಪಿ ತಲೆ ಮರೆಯಿಸಿಕೊಂಡಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಮೈಸೂರಿನ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: