ಸ್ವ ಬಳಕೆಗೆ ಗೋಂಕುದ ಗಂಗಸರ ತಯಾರಿಕೆ ಅವ್ಯಾಹತ | ಸುಳ್ಯ ಮಂಡೆಕೋಲಿನಲ್ಲಿ ಗಂಗಸರ ಸಹಿತ ಮಂಡೆಯಲ್ಲಿ ಹುಳಿರಸ ಪತ್ತೆ
ಗೇರು ಹಣ್ಣಿನ ಕಷಾಯದ ಆಕ್ಟಿವಿಟಿ ಜೋರಾಗಿದೆ. ಯಥೇಚ್ಚ ದೊರಕುವ ಗೇರು ಹಣ್ಣು ಒಂದು ಕಡೆಯಾದರೆ, ಮತ್ತೊಂದೆಡೆ ಫುಲ್ ಲಾಕ್ಡೌನ್ ಆಗಿ ಒಂದು ವೇಳೆ ಮದ್ಯದಂಗಡಿಗಳನ್ನು ಬಂದು ಮಾಡಿದರೆ ಕಷ್ಟ ಕಾಲಕ್ಕೆ ಇರಲಿ ಎಂದು ‘ ಜೀಜದವು ‘ ತಯಾರಿಕೆಗೆ ಗ್ರಾಮೀಣ ಜನ ಹೊರಟಿದ್ದಾರೆ.
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಕಾಯರ್ತೋಡಿ ಎಂಬಲ್ಲಿ ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮತ್ತು 35 ಲೀಟರ್ ಗೇರು ಹಣ್ಣಿನ ಹುಳಿ ರಸ ಪತ್ತೆ ಮಾಡಿದ ಮತ್ತು ಆರೋಪಿಯನ್ನು ಬಂಧಿಸಿದ ಘಟನೆ ಮೇ.1ರಂದು ನಡೆದಿದೆ.
ಮಂಡೆಕೋಲು ಗ್ರಾಮದ ಕಾಯರ್ತೊಡಿ ನಿವಾಸಿ ವಿಶ್ವನಾಥ ಗೌಡ ಎಂಬವರು ಬಂಧಿತ ಆರೋಪಿಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ನಡೆಸಿದ ದಾಳಿಯಿಂದ ಆರೋಪಿಯ ಮನೆಯ ಬಳಿ ಕೊಟ್ಟಿಗೆಯಲ್ಲಿ 2 ಲೀಟರ್ ಅಕ್ರಮ ಕಳ್ಳಭಟ್ಟಿ ಮತ್ತು ಸುಮಾರು 35 ಲೀಟರ್ ಗೇರು ಹಣ್ಣಿನ ಹುಳಿ ರಸ ಪತ್ತೆಯಾಗಿದೆ.
ಕಾರ್ಯಾಚರಣೆ ವೇಳೆ ಆರೋಪಿ ಪರಾರಿಯಾಗಿದ್ದಾರೆ. ಅಬಕಾರಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ಪುತ್ತೂರು ಉಪವಿಭಾಗದ ಉಪನಿರೀಕ್ಷಕ ಅಂಗಾರ, ಅಬಕಾರಿ ರಕ್ಷಕರಾದ ವಿಜಯ, ಪ್ರಶಾಂತ್, ಎಲ್ಲಪ್ಪ, ದಿನೇಶ್ ಭಾಗವಹಿಸಿದ್ದರು.