ಇಸ್ರೇಲ್ನಲ್ಲಿ ಕಾಲ್ತುಳಿತಕ್ಕೆ 28 ಮಂದಿ ಸಾವು,50 ಮಂದಿ ಗಂಭೀರ
ಉತ್ತರ ಇಸ್ರೆಲ್ನಲ್ಲಿ ಸಾರ್ವಜನಿಕ ಸಭೆಯ ವೇಳೆ ನಡೆದ ಕಾಲ್ತುಳಿತದಿಂದ 28 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಲ್ಯಾಗ್ ಬಿ ಓಮರ್ ಆಚರಿಸಲು ಇಸ್ರೇಲ್ನ ಮೌಂಟ್ ಮೆರೂನ್ನಲ್ಲಿ ಸಾರ್ವಜನಿಕ ಸಭೆ ನಡೆಸಲಾಗಿತ್ತು.
ಇಸ್ರೇಲ್ನ ಝಕಾ ಎಂಬ ಸ್ವಯಂ ಸೇವಾ ಸಂಸ್ಥೆ ಕಾಲ್ತುಳಿತದ ಕುರಿತು ಮಾಹಿತಿ ನೀಡಿದೆ.
ಗಂಭೀರವಾಗಿ ಗಾಯಗೊಂಡಿರುವ 50ಕ್ಕೂ ಹೆಚ್ಚು ಮಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ 20 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಡಾ. ಮೆಗೆನ್ ಡೇವಿಡ್ ಆ್ಯಡಮ್ ತಿಳಸಿದ್ದಾರೆ.
ಘಟನೆಯಿಂದ ಗಾಯಗೊಂಡವರನ್ನು ನಹಾರಿಯಾದಲ್ಲಿರುವ ಗಾಲಿಲೀ ಮೆಡಿಕಲ್ ಸೆಂಟರ್ ಮತ್ತು ಸಫೆಸ್ನಲ್ಲಿರುವ ಝೀವ್ ಆಸ್ಪತ್ರೆಗೆ ಸ್ಥಳಾಂತರಿಸಲು 6 ಹೆಲಿಕಾಪ್ಟರ್ ಮತ್ತು ಡಜನ್ಗಟ್ಟಲೆ ಆಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸಿದವು ಎಂದು ಸ್ವಯಂ ಸೇವಾ ಸಂಸ್ಥೆ ಮಾಹಿತಿ ನೀಡಿದೆ.
ಕಾಲ್ತುಳಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.