ಕೋರೋನಾ ಬಂದರೂ ಎದೆಗುಂದದೆ ಗೆದ್ದು ಬಂದ ಶತಾಯುಷಿ ದಂಪತಿಗಳು ನಮ್ಮೆಲ್ಲರಿಗೂ ಸ್ಪೂರ್ತಿ|

ಧೈರ್ಯ ಇದ್ದರೆ ಋಣವನ್ನು ಎದುರಿಸಿ ಗೆದ್ದು ಬರಬರಬಹುದು ಎಂದು ತೋರಿಸಿಕೊಟ್ಟಿದ್ದಾರೆ ಇಲ್ಲೊಬ್ಬ ಶತಾಯುಷಿ ದಂಪತಿ.

ಮಹಾರಾಷ್ಟ್ರದ ಲಾತೂರ್, ಧೇನು ಅವರಿಗೆ 105 ವರ್ಷ, ಅವರ ಪತ್ನಿ ಮೋಟಾಬಾಯಿ ಅವರಿಗೆ 96 ವರ್ಷ. ಈಗ ಇವರಿಬ್ಬರೂಂ ತಮಗೆ ಬಂದ ಕೊರೋನಾ ಪಾಸಿಟಿವ್ ಅನ್ನೋ ಎದುರಿಸಿ ಗುಣಮುಖರಾಗಿ ಆಸ್ಪತ್ರೆಯಿಂದ ವಾಪಸಾಗಿದ್ದಾರೆ
ಅವರಿಬ್ಬರಿಗೂ ಕೊರೋನಾ ಸೋಂಕು ಹೆಚ್ಚಾಗಿರುವ ಕಾರಣ ಇಬ್ಬರನ್ನೂ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಇದೀಗ ಇಬ್ಬರೂ ಕೊರೋನಾವನ್ನು ಗೆದ್ದು ಬಂದಿದ್ದಾರೆ. ಕುಟುಂಬದವರೂ ಕೂಡ ಎಷ್ಟು ಇಳಿವಯಸ್ಸಿನ ಅಜ್ಜ-ಅಜ್ಜಿ ಕೊರೋನಾ ದಿಂದ ಬಚಾವ್ ಆಗಿ ಬರುತ್ತಾರೆಂದು ನಂಬಿರಲಿಲ್ಲ.

ಮೊದಲಿಗೆ ಕೊರೋನಾ ಪಾಸಿಟಿವ್ ಬಂದ ತಕ್ಷಣ ಅವರಿಬ್ಬರೂ ಹೆದರಿದ್ದರು. ನಂತರ ಧೈರ್ಯವಾಗಿ ಎದುರಿಸಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಇಬ್ಬರಿಗೂ ವಯಸ್ಸಾಗಿರುವ ಕಾರಣ ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಾರೆಂಬ ಕಳವಳವಿತ್ತು, ಆಕ್ಸಿಜನ್ ಬೆಂಬಲದಲ್ಲಿಯೇ ಇದ್ದರು ಮತ್ತು 5 ಆಂಟಿವೈರಸ್ ರೆಮಿಡಿಸಿವರ್ ಚುಚ್ಚುಮದ್ದು ನೀಡಲಾಯಿತು ಎಂದು ದಂಪತಿಗೆ ಚಿಕಿತ್ಸೆ ನೀಡಿದ ವೈದ್ಯ ಗಜಾನನ ಎಂಬವರು ಹೇಳಿದ್ದಾರೆ.

Leave A Reply

Your email address will not be published.