ಗೆಳೆಯರೊಂದಿಗೆ ವಿಹಾರಕ್ಕೆ ತೆರಳಿದ್ದ ಉಳ್ಳಾಲದ ಯುವಕ ನಾಪತ್ತೆ
ಮಂಗಳೂರು: ಗೆಳೆಯರೊಂದಿಗೆ ನೇತ್ರಾವತಿ ರೈಲ್ವೇ ಸೇತುವೆ ಬಳಿ ವಿಹಾರಕ್ಕೆ ತೆರಳಿದ್ದ ಯುವಕನೋರ್ವ ದಿಢೀರ್ ನಾಪತ್ತೆಯಾದ ಘಟನೆ ಸೋಮವಾರ ಸಂಜೆ ಉಳ್ಳಾಲ ಠಾಣೆಯ ಸರಹದ್ದಿನಲ್ಲಿ ನಡೆದಿದೆ.
ಈ ಕುರಿತು ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಉಳ್ಳಾಲಬೈಲು ನಿವಾಸಿ ನಿತಿನ್(32) ಎಂಬವರೇ ನಾಪತ್ತೆಯಾದ ಯುವಕ.
ನಿತಿನ್ ಸೋಮವಾರ ಮಧ್ಯಾಹ್ನ ಇಬ್ಬರು ಗೆಳೆಯರ ಜತೆ ಸಂಜೆ ಹೊತ್ತಿನಲ್ಲಿ ನೇತ್ರಾವತಿ ರೈಲ್ವೇ ಸೇತುವೆಯ ಬಳಿ ತೆರಳಿದ್ದರು.
ಬಳಿಕ ನಿತಿನ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ನಿತಿನ್‌ನ ಸಹೋದರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು, ಪೊಲೀಸರು ನಿತಿನ್ ಜೊತೆಗಿದ್ದ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.