‘ಪ್ರಧಾನಿ ಮೋದಿ ಬೀದಿ ಹೆಣವಾಗಲಿ, ನರಳಿ ನರಳಿ ಸಾಯಲಿ ‘ ಎಂದು ಫೇಸ್ಬುಕ್ ಪೋಸ್ಟ್ | ವ್ಯಾಪಕ ಆಕ್ರೋಶ, ಠಾಣೆಯಲ್ಲಿ ದೂರು
ಮಂಗಳೂರಿನಲ್ಲಿ ಓರ್ವ ವ್ಯಕ್ತಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಕೊರೊನಾದಿಂದ ಸತ್ತವರ ಹೆಣದ ಫೋಟೊ ಜೊತೆ ಜನರು ಈ ರೀತಿ ಬೀದಿ ಹೆಣವಾಗಲು ಕಾರಣರಾದ ದೇಶದ ಪ್ರಧಾನಿಯೂ ಬೀದಿ ಬದೀಲಿ ನರಕಯಾತನೆ ಅನುಭವಿಸಿ ಸಾಯಲೆಂದು ಪ್ರಾರ್ಥಿಸಿ ಎಂದು ಪೋಸ್ಟ್ ಹಾಕಿದ್ದಾನೆ.
ಆರೋಪಿ ಲುಕ್ಕನ್ ಅಡ್ಯಾರ್ ವಿರುದ್ಧ ಇದೀಗ ಬಿಜೆಪಿ ಮುಖಂಡರಾದ ಫಝಲ್ ಅಸೈಗೋಳಿ ಎಂಬವರು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆತ ಅಭಿವ್ಯಕ್ತಿ ಸ್ವಾತಂತ್ರದ ಹೆಸರಲ್ಲಿ ದೇಶದ ಪ್ರಧಾನಿಯನ್ನು ಏಕವಚನದಲ್ಲಿ ಸಂಭೋದಿಸಿದ್ದಲ್ಲದೆ ಬೀದಿ ಬದಿಯಲ್ಲಿ ನರಕ ಯಾತನೆ ಅನುಭವಿಸಿ ಸಾಯುವಂತಾಗಲು ಸರ್ವಶಕ್ತನಲ್ಲಿ ಪ್ರಾರ್ಥಿಸಬೇಕೆಂದು ತನ್ನ ಫೇಸ್ಟುಕ್ ಪೇಜ್ ನಲ್ಲಿ ಮನವಿ ಮಾಡಿ ವಿಕೃತಿ ಮೆರೆದಿದ್ದಾನೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲಾ ಧರ್ಮ ಕೊರೋನಾ ಹಾವಳಿ ತಪ್ಪುವಂತೆ ಪ್ರಾರ್ಥನೆ ನಡೆಯುತ್ತಿದ್ದರೆ, ಈತ ದೇಶದ ಪ್ರಧಾನಿ ಸಾಯಲಿ ಎಂದು ಪೋಸ್ಟ್ ಹಾಕುತ್ತಿದ್ದಾನೆ.
ಪವಿತ್ರ ಮೆಕ್ಕಾ ಸೇರಿದಂತೆ ಎಲ್ಲ ತಮ್ಮ ಮಂದಿರಗಳಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ವಿಶ್ವದ ನಾನಾ ರಾಷ್ಟ್ರಗಳು ಭಾರತಕ್ಕೆ ಸಹಾಯ ಹಸ್ತ ಚಾಚುತ್ತಿರುವಾಗ, ಲುಕ್ಕಾನ್ ಅಡ್ಯಾರ್ ಎಂಬ ವ್ಯಕ್ತಿ ಪವಿತ್ರ ರಂಜಾನ್ ತಿಂಗಳಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ವಿಷ ಬೀಜ ಬಿತ್ತುತ್ತಿದ್ದಾನೆಂದು ಮತ್ತು ಅರಾಜಕತೆಯನ್ನು ಉಂಟುಮಾಡುವ ಈತನ ವಿರುದ್ಧ ಆರೋಪಿಸಿ ಬಿಜೆಪಿ ಮುಖಂಡ ಫಝಲ್ ಅಸೈಗೋಳಿ ಅವರು ಲುಕ್ಕನ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಿಜೆಪಿ ಮುಖಂಡ ವಕೀಲ ಮಹಮ್ಮದ್ ಅಸ್ಕರ್ ಜೊತೆಗಿದ್ದರು.