ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ ; ಪ್ರಮುಖ ಆರೋಪಿಗೆ 12 ವರ್ಷ ಕಠಿಣ ಶಿಕ್ಷೆ
ಮಂಗಳೂರು ತಾಲೂಕಿನ ಅಡ್ಯಾರು ಗ್ರಾಮದ ಅಡ್ಯಾರ್ ಗುಡ್ಡೆ ಎಂಬಲ್ಲಿ ಎರಡು ವರ್ಷದ ಹಿಂದೆ ನಡೆದ ಅಪ್ರಾಪ್ತೆ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಝೀರ್ ಎಂಬಾತನಿಗೆ 12 ವರ್ಷ ಕಠಿಣ ಶಿಕ್ಷೆ ಹಾಗೂ 1.16 ಲಕ್ಷ ರೂ. ದಂಡ ವಿಧಿಸಿ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಫೋಕ್ಸೊ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ. ಮತ್ತೋರ್ವ ಆರೋಪಿ ಶಮೀರ್ಗೆ 6 ತಿಂಗಳು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿದೆ.
ಪ್ರಕರಣದ ಹಿನ್ನೆಲೆ: 2019 ಫೆ.9ರಂದು ಪ್ರಕರಣದ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತ ಅಡ್ಯಾರ್ ಬಳಿ ಇರುವ ಗುಡ್ಡೆಯ ಕಲ್ಲು ಬಂಡೆಯ ಮೇಲೆ ಕುಳಿತಿದ್ದಾಗ ಅಲ್ಲಿಗೆ ಬಂದ ವಳಚ್ಚಿಲ್ ಪದವು ನಿವಾಸಿಗಳಾದ ನಝೀರ್ ಮತ್ತು ಶಮೀರ್ ಇಬ್ಬರ ಫೊಟೋ ತೆಗೆದು ವಿಡಿಯೋ ಮಾಡಿ ಜೋಡಿಯನ್ನು ವಿಚಾರಿಸಿದ್ದರು. ಬಳಿಕ ಫೊಟೋ, ವಿಡಿಯೋ ಡಿಲೀಟ್ ಮಾಡಲು 20 ಸಾವಿರ ರೂ. ನೀಡಬೇಕು. ಇಲ್ಲದಿದ್ದರೆ ಪೊಲೀಸರಿಗೆ ತಿಳಿಸುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆ ಎಂದು ಬೆದರಿಸಿದ್ದರು. ‘ನಾವು ವಿದ್ಯಾರ್ಥಿಗಳು ಅಷ್ಟು ಹಣ ನಮ್ಮಲ್ಲಿಲ್ಲ ಎಂದು ಸಂತ್ರಸ್ತರು ಹೇಳಿದರೂ ಕೇಳದ ಆರೋಪಿಗಳು ಅಪ್ರಾಪ್ತೆಯ ಜತೆಗಿದ್ದ ಆಕೆ ಸ್ನೇಹಿತನ ಎಟಿಎಂ ಕಸಿದು ಹಣ ಡ್ರಾ ಮಾಡಿಕೊಂಡು ಬರಲು ಶಮೀರ್ ಹೋಗಿದ್ದ. ಆದರೆ ಹಣ ಬರದೆ ಇದ್ದಾಗ ಕರೆ ಮಾಡಿ ಆಕೆಯ ಸ್ನೇಹಿತನನ್ನು ಬರಲು ಹೇಳಿದ್ದಾನೆ.
ಈ ಸಂದರ್ಭ ನಝೀರ್ ಅಪ್ರಾಪ್ತೆಯನ್ನು ಅತ್ಯಾಚಾರ ನಡೆಸಿದ್ದ. 1 ಸಾವಿರ ರೂ. ಡ್ರಾ ಮಾಡಿಕೊಂಡು ಬಂದ ಬಳಿಕ ಶಮೀರ್ ಕೂಡಾ ಆಕೆಯನ್ನು ಅತ್ಯಾಚಾರಗೈದಿದ್ದ. ಬಳಿಕ ಈ ವಿಷಯ ಯಾರಿಗಾದರೂ ತಿಳಿಸಿದರೆ ವಿಡಿಯೋ ವೈರಲ್ ಮಾಡುತ್ತೇವೆ ಎಂದು ಬೆದರಿಸಿದ್ದರು ಎಂದು ಆರೋಪಿಸಲಾಗಿದೆ. ಘಟನೆ ನಡೆದು ಒಂದು ವಾರವಾದರೂ ಸಂತ್ರಸ್ತರು ಪೊಲೀಸ್ ಠಾಣೆಗೆ ದೂರು ನೀಡಿರಲಿಲ್ಲ.
ಅಪರಾಧಿಗಳು ಹಣ ನೀಡುವಂತೆ ಕರೆ ಮಾಡಿ ಮತ್ತೆ ಕಿರುಕುಳ ನೀಡಿದ್ದರು.
ಕೊನೆಗೂ ಫೆ.18ರಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆಗಿನ ಇನ್ಸ್ಪೆಕ್ಟರ್ ಕಲಾವತಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ 15 ಸಾಕ್ಷಿದಾರರನ್ನು ಹಾಗೂ 21 ದಾಖಲೆಗಳನ್ನು ವಿಚಾರಣೆ ನಡೆಸಿದ್ದರು.
ವಿಶೇಷ ಸರಕಾರಿ ಅಭಿಯೋಜಕ ವೆಂಕಟ್ರಮಣ ಸ್ವಾಮಿ ಸಿ. ಸರಕಾರದ ಪರವಾಗಿ ವಾದಿಸಿದ್ದರು.
ನಝೀರ್ ದಂಡದ ಮೊತ್ತದಲ್ಲಿ 1 ಲಕ್ಷ ರೂ. ಸಂತ್ರಸ್ತೆಗೆ ನೀಡಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ 2 ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಮಂಗಳವಾರ ನೀಡಿದ ಆದೇಶದಲ್ಲಿ ತಿಳಿಸಿದೆ.
ಶಿಕ್ಷೆ ವಿವರ: ಅತ್ಯಾಚಾರ ಪ್ರಕರಣಕ್ಕೆ ನಝೀರ್ಗೆ 12 ವರ್ಷ ಕಠಿಣ ಜೈಲು ಶಿಕ್ಷೆ, 1.10 ಲಕ್ಷ ರೂ. ದಂಡ, ಕೊಲೆ ಬೆದರಿಕೆಗೆ 6 ತಿಂಗಳು ಕಠಿಣ ಶಿಕ್ಷೆ, 3 ಸಾವಿರ ರೂ. ದಂಡ, ಹಣ ಲೂಟಿ ಮಾಡಿರುವುದಕ್ಕೆ 6 ತಿಂಗಳು ಕಠಿಣ ಶಿಕ್ಷೆ, 3 ಸಾವಿರ ರೂ. ದಂಡ, ಶಮೀರ್ಗೆ ಹಣ ಲೂಟಿ ಮಾಡಿರುವುದಕ್ಕೆ 6 ತಿಂಗಳು ಶಿಕ್ಷೆ, 3 ಸಾವಿರ ರೂ. ದಂಡ ವಿಧಿಸಿದೆ.
E 420 jihadigalannu gallige yerisabeku