‘ ಮಸೀದಿ ಮುಚ್ಚಲಾಗಿದೆ ‘ ಎಂದು ಗೇಟ್ ಗೆ ಬೋರ್ಡು | ಒಳಗೆ 150 ಜನರಿಗೆ ಪಾಠ ಪ್ರವಚನ, ತಹಶೀಲ್ದಾರ್ ದಾಳಿ !

ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ತಪ್ಪಿದ್ದು, ಜನ ತತ್ತರಿಸಿ ಹೋಗಿದ್ದರೆ, ಅತ್ತ ಮಡಿಕೇರಿಯಲ್ಲಿ ಮಸೀದಿಯ ಒಳಗೆ 150ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರವಚನ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಕೊಡಗಿನ ಆರ್ಜಿ ಗ್ರಾಮದ ಮಸೀದಿಯಲ್ಲಿ ಪ್ರವಚನ ನಡೆಯುತ್ತಿತ್ತು. ಆದರೆ ಹೊರಗಡೆಯಿಂದ ‘ಮಸೀದಿ ಮುಚ್ಚಲಾಗಿದೆ ‘ಎಂಬ ಬೋರ್ಡು ತಗುಲಿಸಲಾಗಿತ್ತು.

ವಿರಾಜಪೇಟೆ ತಹಶೀಲ್ದಾರ್ ಯೋಗಾನಂದ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ, ಇಂತಹಾ ಯಾವುದೇ ಇಲ್ಲದೆ ಮಕ್ಕಳನ್ನು ಕೂಡಿಹಾಕಿ ಕೊಂಡು ಪಾಠಪ್ರವಚನ ಮಾಡುತ್ತಿರುವುದು ಕಂಡುಬಂದಿದೆ.

ಒಳಗೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಪ್ರವಚನ ಮಾಡುತ್ತಿದ್ದುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಮಸೀದಿ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕೋರೋಣ ಎರಡನೇ ಅಲೆಯು ಮಕ್ಕಳಲ್ಲಿ ಕೂಡ ಹೆಚ್ಚು ಪ್ರಮಾಣದ ಸೋಂಕನ್ನು ಉಂಟುಮಾಡುವ ಹಿನ್ನೆಲೆಯಲ್ಲಿ, ಮಕ್ಕಳಿಗೆ ಕೊರೊನಾ ಸೋಂಕು ತಗುಲಿದರೆ ಗತಿ ಏನು ಎಂಬ ಪ್ರಶ್ನೆ ಎದ್ದಿದೆ. ಧರ್ಮ ಬೋಧಿಸುವ ಇವರೇ ಕಾನೂನಿಗೆ ಮಣ್ಣೆರೆಚಿದರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.ಮಕ್ಕಳ ಪ್ರಾಣದ ಜತೆ ಆಟ ಆಡುವುದು ಮಾತ್ರವಲ್ಲ, ಇಂತಹಾ ದೊಡ್ಡ ಗುಂಪು ಸೇರುವಿಕೆ ಕೋರೋನಾ ವ್ಯಾಪಕ ಹರಡುವಿಕೆಗೆ ಕಾರಣವಾಗಲಿದೆ ಎನ್ನುವುದು ಸಾರ್ವಜನಿಕರ ಆತಂಕ ವಾಗಿದೆ. 

Leave A Reply

Your email address will not be published.