ಕಿರು ಸೇತುವೆ ಸಮೀಪ ಅಪರಿಚಿತ ಶವ ಪತ್ತೆ

ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಪಡುಪಣಂಬೂರು ಕಿರು ಸೇತುವೆಯ ಕೆಳಗೆ ಅಪರಿಚಿತ ಪುರುಷ ಶವ ಪತ್ತೆಯಾಗಿದೆ.

ಹೆದ್ದಾರಿಯ ಬಳಿ ಬೆಳೆಯುತ್ತಿರುವ  ಹುಲ್ಲುಗಳನ್ನು ತೆಗೆಯುತ್ತಿರುವ ಕಾರ್ಮಿಕರಿಗೆ ಕೆಸರು ನೀರಿನಲ್ಲಿ ಈ ಶವ ಕಂಡು ಬಂದಿದೆ.

ಅವರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಅಂದಾಜು 50 ರಿಂದ 60ರ ಹರೆಯದವರಾಗಿದ್ದು, ಶವ ಕಿರು ಸೇತುವೆಯ ಕೆಳಗೆ ಕೆಸರು ನೀರಿನಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ವ್ಯಕ್ತಿ ನೀರಿಗೆ ಬಿದ್ದು ಸಾಕಷ್ಟು ದಿನಗಳಾಗಿರುವ ಸಾಧ್ಯತೆ ಇದ್ದು, ಸ್ವಲ್ಪ ಡಿಕಂಪೋಸ್ ಆಗಿದೆ ಎಂದು ತಿಳಿದು ಬಂದಿದೆ.

ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಾರಸುದಾರರ ಪತ್ತೆಗೆ ಯತ್ನ ಸಾಗಿದೆ.

Leave A Reply

Your email address will not be published.