ಬಲಿಷ್ಟ ತೊಡೆಗಳ ಒಡತಿ ಇಲಿಯಾನಾ ಬಗ್ಗೆ ಬಾಡಿ ಶೇಮಿಂಗ್ !!

ಇಲಿಯಾನಾ ಡಿ ಕ್ರೂಸ್ ಭಾರತೀಯ ಸಿನಿರಂಗದ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ನಟಿ. ತಮ್ಮ ಮಾದಕ ನೋಟ, ಎತ್ತರದ ನಿಲುವು ಮತ್ತು ಗಾತ್ರದಿಂದ  ಇಲಿಯಾನಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಿಂದಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಆಕೆ ಮಿಂಚಿದ್ದು, ಇಲಿಯಾನಾ, ಇತ್ತೀಚೆಗೆ ಬಾಡಿ ಶೇಮಿಂಗ್ (ದೇಹದ ಆಕಾರದ ಬಗ್ಗೆ ಅವಮಾನ ಮಾಡುವುದು) ಬಗ್ಗೆ ಮಾತನಾಡಿದ್ದಾರೆ.

ಬೆಳೆಯುತ್ತಲೇ ಆಕೆ ಸೌಂದರ್ಯವತಿ ಆಗುವುದರ ಜತೆಗೇ, ಆಕೆ ಬಲಿಷ್ಟ ನಿತಂಬಗಳನ್ನು ಹೊಂದಿದ್ದಳು. ಸೊಂಟ ದಿಂದ ಕೆಳಭಾಗ ದಪ್ಪಕ್ಕೆ ಇದ್ದು, ಅದು ಆಕೆಗೆ ಮುಜುಗುರವನ್ನು ಉಂಟುಮಾಡುತ್ತಿತ್ತು. ಆದರೆ ತೆಲುಗು ಚಿತ್ರರಂಗ ಆಕೆಯನ್ನು ಬರಬೇಡಿ ಅಪ್ಪಿಕೊಂಡಿತು. ದಪ್ಪಕ್ಕೆ ಭರ್ಜರಿಯಾಗಿ ಕಾಣುವ ಚಿತ್ರ ನಟಿಯರನ್ನು ತೆಲುಗು ಪ್ರೇಕ್ಷಕರು ಹೆಚ್ಚಾಗಿ ಇಷ್ಟಪಡುತ್ತಿದ್ದ ಅವರಿಗೆ ಇಲಿಯಾನ ತುಂಬಾ ಇಷ್ಟವಾಗಿದ್ದಳು.

ಕೇವಲ 12 ರ ವಯಸ್ಸಿನಲ್ಲಿಯೇ ಇಲಿಯಾನಾ ಬಾಡಿ ಶೇಮಿಂಗ್ ಅನುಭವಿಸಿದ್ದರಂತೆ. ‘ ನನ್ನ ಮುಂದೆ ಅಂದು ನಡೆದ ಎಲ್ಲ ಘಟನೆಗಳು ನಿನ್ನೆಯಷ್ಟೇ ನಡೆದಿದೆ ಎನ್ನುವಷ್ಟು ನೆನಪಿದೆ. 12 ನೇ ವಯಸ್ಸಿನ ನಾನು ಬಾಡಿ ಶೇಮಿಂಗ್ ಅನುಭವಿಸಿದ್ದೆ. ಆಗ ತಾನೇ ನಾನು ವಯಸ್ಸಿಗೆ ಬಂದಿದ್ದೆ. ನಾನು ಬೆಳೆದಂತೆ ನನ್ನ ದೇಹವನ್ನು ನೋಡಿ ಹಲವರು ಹಲವಾರು ಕಾಮೆಂಟ್‌ಗಳನ್ನು ಮಾಡುತ್ತಿದ್ದರು.’

” ಓ ಮೈ ಗಾಡ್, ನಿನ್ನ ನಿತಂಬ ಯಾಕಿಷ್ಟ ದಪ್ಪಗಾಗಿದೆ ಎಂದು ಕೇಳುತ್ತಿದ್ದರು. ನೀವು ಈ ಹೇಳುತ್ತಿದ್ದೀರಿ ಎಂದು ನಾನು ಅರಿಯದೆ ಕೇಳುತ್ತಿದ್ದೆ ” ಎಂದು ಇಲಿಯಾನಾ ತಮ್ಮ ಜೀವನದ ಘಟನೆಯನ್ನು ಮೆಲುಕು ಹಾಕಿದರು.
ಇದೇ ವಿಚಾರವಾಗಿ ಎಷ್ಟೋಸಲ ಕೆಟ್ಟ ಕಾಮೆಂಟ್ ಗಳು ಬಂದಿವೆ. ಕೆಲ ಜನರ ಇಂತಹ ಕೆಲಸಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ನಾನು ತಡವಾಗಿ ಕಲಿತಿದ್ದೇನೆ. ನಂತರ, ಈಗ ನನ್ನ ದೇಹದ ಬಗ್ಗೆ ತಾನೇ ಸಕಾರಾತ್ಮಕ ಮನೋಭಾವವನ್ನು ( ಬಾಡಿ ಪಾಸಿಟಿವಿಟಿ) ಹೊಂದಿದ್ದೇನೆ ಎಂದಿದ್ದಾಳೆ.

ಬಾಲಿವುಡ್‌ನಲ್ಲಿ ಇಲಿಯಾನಾ ರುಸ್ತುಮ್, ಪಾಗಲ್ ಪತ್ನಿ, ಏಕತಾ ಸೋಲ್ಜರ್ ಮುಂತಾದ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದು, ಕೊನೆಯದಾಗಿ ಅಭಿಷೇಕ್ ಬಚ್ಚನ್ ಅಭಿನಯದ ದಿ ಬಿಗ್ ಬುಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಆಗಿದ್ದಾಳೆ.

Leave A Reply

Your email address will not be published.