2 ವರ್ಷದ ಹಿಂದೆ ಪ್ರೀತಿಸಿ ಹಸೆಮನೆಯೇರಿದ್ದ ಸೀರಿಯಲ್ ಜೋಡಿ | ಕೌಟುಂಬಿಕ ಕಲಹ ಹಿನ್ನೆಲೆ ಕೈಕೊಯ್ದು ನಿದ್ದೆ ಮಾತ್ರೆ ಸೇವಿಸಿ ಕೋಮಾ ತಲುಪಿದ ನಟ

ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಕಿರುತೆರೆಯ ನಟ-ನಟಿಯ ಜೋಡಿಯಲ್ಲಿ ಕೌಟುಂಬಿಕ ಕಲಹ ಏರ್ಪಟ್ಟು ನಟ ತನ್ನ ಕಾರಿನಲ್ಲೇ ಕೈ ನರ ಕತ್ತರಿಸಿಕೊಂಡು ನಿದ್ರೆ ಮಾತ್ರೆ ಸೇವಿಸಿ ಕೋಮ ಸ್ಥಿತಿಯಲ್ಲಿದ್ದಾರೆ.

ಮಲಯಾಳಂ ಟಿವಿ ಸೀರಿಯಲ್​ ನಟ ಆದಿತ್ಯ ಜಗನ್ ಎಂಬವರೇ ಈಗ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರು.

ಮಲಯಾಳಂ ಟಿವಿ ಸೀರಿಯಲ್​ನಲ್ಲಿ ನಟಿಸಿದ ಆದಿತ್ಯ ಜಯನ್, ಕೌಟುಂಬ ಕಲಹಕ್ಕೆ ಬೇಸತ್ತು ರವಿವಾರ ಸಂಜೆ ನಾಡುವಿಲಾಲ್ ಎಂಬಲ್ಲಿ ಕಾರು ನಿಲ್ಲಿಸಿ ಆತ್ಮಹತ್ಯೆಗೆ ಯತ್ನಿಸಿ, ಕೋಮಾ ಸ್ಥಿತಿಗೆ ತಲುಪಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಪಾಸಣೆ ನಡೆಸಿದ ವೈದ್ಯರು, ನಟನ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದ್ದು,ತೀವ್ರ ನಿಗಾಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆದಿತ್ಯ ಜಯನ್​ ತನಗೆ ಕಿರುಕುಳ ಕೊಡುತ್ತಿದ್ದರು ಎಂದು ಇತ್ತೀಚಿಗೆ ಇವರ ಪತ್ನಿ, ನಟಿ ಅಂಬಿಲಿ ದೇವಿ ಆರೋಪ ಮಾಡಿದ್ದು ಭಾರಿ ದೊಡ್ಡ ಸುದ್ದಿಯಾಗಿತ್ತು.

‘ಸೀತಾ’ ಎಂಬ ಮಲಯಳ ಧಾರಾವಾಹಿಯಲ್ಲಿ ಆದಿತ್ಯ ಜಯನ್ ಮತ್ತು ಅಂಬಿಲಿ ದೇವಿ ಪತಿ-ಪತ್ನಿ ಪಾತ್ರ ನಿರ್ವಹಿಸಿದ್ದರು.

ಈ ಧಾರಾವಾಹಿಯ ಚಿತ್ರೀಕರಣದ ವೇಳೆ ಇವರಿಬ್ಬರಿಗೂ ಪ್ರೀತಿ ಚಿಗುರೊಡೆದಿದೆ.

ಹೀಗೆ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ಆದರೆ, ಕೆಲ ಸಮಯಗಳಿಂದ ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಪತಿ ಆದಿತ್ಯ ಜಯನ್​ ಕಿರುಕುಳ ಕೊಡುತ್ತಿದ್ದಾರೆ ಎಂದು ಅಂಬಿಲಿ ಆರೋಪಿಸಿದ್ದರು. ಅಲ್ಲದೆ ವಿಚ್ಛೇದನ ಪಡೆಯಲೂ ನಿರ್ಧರಿಸಿದ್ದರು.

ಈ ನಡುವೆ ಆದಿತ್ಯ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Leave A Reply

Your email address will not be published.