ದೆಹಲಿ ತತ್ತರ : ಅಂತಿಮ ಸಂಸ್ಕಾರಕ್ಕಾಗಿ 20 ಗಂಟೆ ಕ್ಯೂ | ಮೈದಾನವೇ ಸ್ಮಶಾನ, ಸಾಮೂಹಿಕ ಸಂಸ್ಕಾರ !!
ರಾಷ್ಟ್ರ ರಾಜಧಾನಿ ದೆಹಲಿಲ್ಲಿ ಕೋವಿಡ್-19 ನಿಂದ ಮೃತಪಟ್ಟ 50 ಮಂದಿಯನ್ನು ಏಕಕಾಲದಲ್ಲಿ ಶವಸಂಸ್ಕಾರ ಮಾಡಲಾಗಿದೆ.
ಅಲ್ಲಿ ಮೈದಾನವನ್ನೇ ಸ್ಮಶಾನವಾಗಿ ಪರಿವರ್ತಿಸಿ, ಶವಗಳ ಮೇಲೆ ಎತ್ತರದ ಕಟ್ಟಿಗೆಯ ಗುಪ್ಪೆ ಇಟ್ಟು ಮಂಗಳವಾರ ಸಾಮೂಹಿಕವಾಗಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಒಂದು ಕಡೆ ಬೆಂಕಿಯಿಂದ ಚಿತೆ ಉರಿಯುತ್ತಿದ್ದರೆ ಮತ್ತೊಂದೆಡೆ ಹೊಸ ಗುಪ್ಪೆಗಳಿಗೆ ಬೆಂಕಿ ಇಕ್ಕಲಾಗುತ್ತಿತ್ತು. ಒಟ್ಟು 50 ಶವಗಳನ್ನು ಮಲಗಿಸಲಾಗಿತ್ತು ಎನ್ನಲಾಗಿದೆ.
ದೆಹಲಿ ಹಿಂದೆಂದೂ ಊಹಿಸಲಾಗದಂತಹ ದುರಂತಕ್ಕೆ ಸಿಲುಕಿ ತನ್ನ ಚೈತ್ಯನ್ಯವನ್ನು ಕಳೆದುಕೊಂಡಂತಾಗಿದ್ದು, ಸ್ಮಶಾನಗಳಲ್ಲಿ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಒಂದೇ ಸಮಯಕ್ಕೆ ಬರುವ ಹೆಚ್ಚಿನ ಶವಗಳಿಂದಾಗಿ ಶವಾಗಾರಗಳ ಸಿಬ್ಬಂದಿ ದಿಕ್ಕೆಟ್ಟಿದ್ದಾರೆ.
ಶವ ಸಂಸ್ಕಾರ ಮಾಡಲು 20 ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿರುವುದಾಗಿ ಸಂಬಂಧಿಕರು ತಮ್ಮ ಗೋಳನ್ನು ತೋಡಿಕೊಳ್ಳುತ್ತಿದ್ದಾರೆ. ಇಲ್ಲಿಯ ಪರಿಸ್ಥಿತಿ ವಿವರಿಸಲು ಹೆಚ್ಚಿನ ಮಾತು ಬೇಕಿಲ್ಲ, ಮೈದಾನದಲ್ಲಿ ಗುಡ್ಡೆ ಹಾಕಿರುವ ಆ ಶವಗಳ ರಾಶಿಯನ್ನು ನೋಡಿದರೆ ಸಾಕು. ಅಷ್ಟುುು ಭೀಕರವಾಗಿದೆ ಅಲ್ಲಿಿನ ಪರಿಸ್ಥಿತಿಿ.
ನನ್ನ ಜೀವನದಲ್ಲಿಯೇ ಇಂತಹ ಕೆಟ್ಟ ಪರಿಸ್ಥಿತಿಯನ್ನು ನೋಡಿರಲಿಲ್ಲ. ದೆಹಲಿಯ ಎಲ್ಲಾ ಸ್ಮಶಾನಗಳು ಮೃತದೇಹಗಳಿಂದ ತುಂಬಿ ಹೋಗಿರುವುದಾಗಿ ಮಾಸ್ಸಿ ಚಿತಾರಾಗದ ಮಾಲೀಕ ವಿನೀತಾ ಮಾಸ್ಸಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಧಿಕೃತ ಮಾಹಿತಿಗಳ ಪ್ರಕಾರ ಈ ತಿಂಗಳಲ್ಲಿ 3,601 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 2,267 ಜನರು ಕಳೆದ ಒಂದು ವಾರದಿಂದೀಚೆಗೆ ಸಾವನ್ನಪ್ಪಿದ್ದಾರೆ. ಫೆಬ್ರವರಿಯಲ್ಲಿ 57, ಮಾರ್ಚ್ ನಲ್ಲಿ 117 ಮಂದಿ ಸಾವನ್ನಪ್ಪಿದ್ದರು