Ad Widget

ಉಡುಪಿ ಡಿಸಿ ಜಗದೀಶ್ Vs ಸೋಷಿಯಲ್ಸ್ | ಮುಂದುವರೆದ ಸಮರ !

ಮಾಸ್ಕ್ ಧರಿಸದೆ, ಸರ್ಕಾರ ರೂಪಿಸಿದ್ದ ನಿಯಮಗಳನ್ನು ಮುರಿದು ನಡೆಯುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ ಮಗಳು ಮೆಹಂದಿ ಕಾರ್ಯಕ್ರಮದಲ್ಲಿ ಉಡುಪಿಯವರಾದ ಜಗದೀಶ್ ಅವರು ಭಾಗವಹಿಸಿದ್ದನ್ನು ಸಾಮಾಜಿಕ ಜಾಲತಾಣಗಳು ಪ್ರಶ್ನಿಸಿದ್ದವು. ಈ ವಾಕ್ ಟಾಕ್ ಸಮರ ಮುಂದುವರೆದಿದೆ. ಡಿಸಿ ಜಗದೀಶ್ ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಅಲ್ಲಲ್ಲಿ ಹೇಳಿಕೆಗಳು ಹೊರಬರುತ್ತಿವೆ. ಡಿಸಿ ಅವರ ಪ್ರತಿಕ್ರಿಯೆ ಹೀಗಿತ್ತು ನೋಡಿ.

ಡಿಸಿಯವರು ಏನಂದರು ?

“ನನ್ನ ಮನೆಯ ಪಕ್ಕದಲ್ಲಿರುವ ಹೆಚ್ಚುವರಿ ಎಸ್ಪಿ ಮನೆಯಲ್ಲಿ ಅವರ ಮಗಳ ಮೆಹಂದಿ ಕಾರ್ಯಕ್ರಮವನ್ನು ಕೇವಲ ನಾಲ್ಕು ಕುಟುಂಬಗಳಿಗೆ ಸೀಮಿತಗೊಳಿಸಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಅವರ ಕ್ಲೋಸ್ ಫ್ಯಾಮಿಲಿಯ ಕೆಲವೇ ಕೆಲವು ಮಂದಿ, 15 ಜನರೊಳಗೆ ಸೇರಿದ್ದರು. ಅದು ಸಾರ್ವಜನಿಕ ಸ್ಥಳ ಅಲ್ಲ. ಆದುದರಿಂದ ಅಲ್ಲಿ ಮಾಸ್ಕ್ ಧರಿಸಬೇಕೆಂಬುದು ಕಡ್ಡಾಯ ಅಲ್ಲ. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿರುವುದು ಸಾರ್ವಜನಿಕ ಸ್ಥಳದಲ್ಲಿ ಮಾತ್ರ.
8.50ಕ್ಕೆ ಕರ್ಪ್ಯೂಗಿಂತ ಮೊದಲೇ ಮನೆ ಸೇರಿದ್ದೇನೆ. ಅಲ್ಲಿ ನಾವು ಐದಾರು ನಿಮಿಷಗಳ ಕಾಲ ಮಾತ್ರ ಇದ್ದೆವು. ಮಧುಮಗಳ ಕೋರಿಕೆ ಮೇರೆಗೆ ಆಕೆಯೊಂದಿಗೆ ಫೋಟೋಗಾಗಿ ಒಂದು ನಿಮಿಷ ಮಾತ್ರವೇ ಮಾಸ್ಕ್ ತೆಗೆದಿದ್ದೇನೆ. ಇದು ಉಡುಪಿಯ ಜಿಲ್ಲಾಧಿಕಾರಿ ಜಗದೀಶ್ ಅವರ ಸಮಜಾಯಿಷಿ. ಹೆಚ್ಚುಕಮ್ಮಿ ASP ಯವರೂ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸರಕಾರದ ಮಾರ್ಗಸೂಚಿ ಪ್ರಕಾರ ಮದುವೆಯಲ್ಲಿ 50 ಮಂದಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ವಧು ಮತ್ತು ವರರ ಕಡೆಯವರು ತಲಾ 25ರಂತೆ ಒಟ್ಟು 50 ಮಂದಿಯ ಪಟ್ಟಿಯನ್ನು ಅನುಮತಿ ಪಡೆಯುವಾಗ ತಾಲೂಕು ಕಚೇರಿಗೆ ಸಲ್ಲಿಸಬೇಕು ಎಂಬ ನಿಯಮ ಕೂಡ ಇದೆ. ಆದರೆ ಮೆಹಂದಿ ಕಾರ್ಯಕ್ರಮ ಕೂಡಾ ಮದುವೆಯ ಒಂದು ಭಾಗ. ಸಮಾರಂಭ ಯಾವುದು ಎನ್ನುವುದು ಮುಖ್ಯವಲ್ಲ. ಎಷ್ಟು ಮಂದಿ ಸೇರಬಹುದು, ಸೇರಿದಾಗ ಹೇಗೆ ವರ್ತಿಸಬೇಕು ಎನ್ನುವುದು ಕೋವಿಡ್ ನಿಯಂತ್ರಣ ಮಾಡಲು ಬೇಕಾದ ಕಾನ್ಸೆಪ್ಟ್. ಪಬ್ಲಿಕ್ ಫಂಕ್ಷನ್ ಮತ್ತು ಪ್ರೈವೇಟ್ ಫಂಕ್ಷನ್ ಎರಡರ ಮಧ್ಯೆ ಅಷ್ಟು ದೊಡ್ಡ ವ್ಯತ್ಯಾಸ ಇಲ್ಲ. ಗುಂಪು ದೊಡ್ಡದು ಆದಂತೆ ಅದು ಪಬ್ಲಿಕ್ ಫಂಕ್ಷನ್ ಆಗುತ್ತದೆ. ಅದು ಡಿಸಿ ಜಗದೀಶ್ ಅವರಿಗೆ ಗೊತ್ತಿಲ್ಲವೆ ?
 
ಆದರೂ ಅವಕಾಶ ಇಲ್ಲದ ಮೆಹಂದಿ ಕಾರ್ಯಕ್ರಮವನ್ನು ತಡೆಯಬೇಕಾದ ಡಿಸಿ, ಅದರಲ್ಲಿ ಭಾಗವಹಿಸಿರುವುದೇ ದೊಡ್ಡ ತಪ್ಪು. ಅದಕ್ಕಿಂತ ದೊಡ್ಡ ತಪ್ಪು ಅದನ್ನು ಸಮರ್ಥಿಸುತ್ತ ಸಾಗುತ್ತಿರುವುದು.

ಆದರೆ ಇಲ್ಲಿ ಪ್ರಕಟ ಆಗಿರುವ ಫೋಟೋಗಳು ಸುಳ್ಳು ಹೇಳುವುದಿಲ್ಲ. ಡಿಸಿ ಸಾಹೇಬ್ ಹೇಳಿದಂತೆ ಅಲ್ಲಿ 15 ಜನ ಅಲ್ಲ ಇದ್ದದ್ದು. ಅಲ್ಲಿ ಹುಡುಗನ ಗೆಳೆಯರೇ 15 ಜನಕ್ಕೆ ಮೇಲೆ ಸೇರಿದ್ದರು. ಒಟ್ಟು 75 ಜನಕ್ಕಿಂತ ಮೇಲೆ ಇದ್ದರು. ಅಲ್ಲಿ ತೆಗೆದ ಪೋಟೋಗಳೆ ಸಾಕ್ಷಿ ಹೇಳುತ್ತಿವೆ.

ಇದರ ಜತೆಗೆ ಆನಿವಾರ್ಯ ಸಂದರ್ಭದಲ್ಲಿ, ಮೊನ್ನೆ ವಿದ್ಯಾರ್ಥಿನಿಯರು ಬಸ್ಸಿನಲ್ಲಿ ಸಂಜೆ ಮನೆಗೆ ಹೋಗುತ್ತಿರುವಾಗ ದಾರಿ ಮಧ್ಯ ಇಳಿಸಿ ಹೋದದ್ದು ಪೋಷಕರನ್ನು ಮತ್ತು ಸಾರ್ವಜನಿಕರನ್ನು ಕೆರಳಿಸಿದೆ. ಅಲ್ಲದೆ ಡಿಸಿಯವರು ಖಾಸಗಿ ಬಸ್ಸು ಮತ್ತು ಇತರ ಪಬ್ಲಿಕ್ ಟ್ರಾನ್ಸ್ ಪೋರ್ಟ್ ನಲ್ಲಿ ಡ್ರೈವರ್ ಗಳಾಗಿ ಕೆಲಸ ಮಾಡಿಕೊಂಡಿರುವವರಿಗೆ ‘ ಏಯ್, ಇಳಿಯೋ, ಯಾವನೋ ನೀನು ‘ ಮುಂತಾದ ರೀತಿಯಲ್ಲಿ ಕರೆಯುತ್ತಿದ್ದಾರೆ ಎಂದು ಆರೋಪಗಳಿವೆ. ಇವೆಲ್ಲಾ ಕಾರಣಕ್ಕಾಗಿ ಸಾಮಾಜಿಕ ಜಾಲತಾಣ ಇವತ್ತು ಡಿಸಿ ಜಗದೀಶ್ ಹಿಂದೆ ಬಿದ್ದಿರುವುದು.

” ಏನೋ ಮೈಮರೆವಿನಿಂದ ಹೀಗೆ ಆಗಿದೆ. ಅದು ಫ್ಯಾಮಿಲಿ ಫಂಕ್ಷನ್ ಅಂದುಕೊಂಡಿದ್ದೆ. ನನ್ನಿಂದ ತಪ್ಪಾಯಿತು. ಸ್ಸಾರಿ  ” ಎಂದು ಒಪ್ಪಿಕೊಂಡು ಮುಂದೆ ಸಾಗುವ ಬದಲು ಡಿಸಿ ಸುಳ್ಳಿನ ಮೇಲೆ ಸುಳ್ಳು ಹೇಳಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಲಕ್ಷಣವಂತೂ ಅಲ್ಲವೇ ಅಲ್ಲ.

ಈ ಮಧ್ಯೆ ಕೋವಿಡ್ ನಿಯಮ ಉಲ್ಲoಘಿಸಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಭಾಗಿಯಾದ ಉಡುಪಿ ಡಿ.ಸಿ ಜಿ.ಜಗದೀಶ್ ರನ್ನ ಕೂಡಲೇ ಅಮಾನತು ಮಾಡಲು ಅಖಿಲ ಭಾರತ ಹಿಂದೂ ಮಹಾ ಸಭಾ ರಾಜ್ಯ ಕಾರ್ಯಾಧ್ಯಕ್ಷ ಸ್ವಾಮಿ ಡಾಕ್ಟರ್ ಶ್ರೀ ಸುಂದರ ಜೀ ಅವರು ಅಗ್ರಹಿಸಿದ್ದಾರೆ.

ಈ ನಡುವೆ ಸಾಮಾಜಿಕ ಹೋರಾಟಗಾರ ಪ್ರಕಾಶ್ ಮಲ್ಪೆಯವರು ಘಟನೆ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದು, ಸರ್ಕಾರಿ ಅಧಿಕಾರಿಗಳು ಆಯೋಜಿಸುವ ಕಾರ್ಯಕ್ರಮದಲ್ಲಿ ಕೊರೋನಾ ಹರಡುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. 

ಬಡವರ ಮತ್ತು ಸಾಮಾನ್ಯ ಜನರ ಮೇಲೆ ಮಾತ್ರ ನಿಮ್ಮ ದಂಡಾಸ್ತ್ರ, ಕಾನೂನು ಎಲ್ಲರಿಗೂ ಒಂದೇ ಇರಲಿ ಎಂಬುದೇ ಈಗ ಹೋರಾಟ ಮಾಡುತ್ತಿರುವ ಸೋಷಿಯಲ್ ಗಳ ಆಶಯ.

Leave a Reply

error: Content is protected !!
Scroll to Top
%d bloggers like this: