ಸೋಂಕಿತ ತಾಯಿ ಮುಖ ನೋಡಲು ಬಿಡದ ವ್ಯವಸ್ಥೆ | ಯುವಕ ಆಸ್ಪತ್ರೆಯ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯತ್ನ
ತನ್ನ ಸೋಂಕಿತ ತಾಯಿಯ ಮುಖ ನೋಡಲು ಬಿಟ್ಟಿಲ್ಲ ಎಂದು ಮನನೊಂದು ಆಸ್ಪತ್ರೆಯ ಕಟ್ಟಡದ ಮೇಲೇರಿದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಯುವಕನ ತಾಯಿ ಆಸ್ಪತ್ರೆಯಲ್ಲಿ ಕಳೆದ 12 ದಿನಗಳಿಂದ
ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ ಆರೋಗ್ಯ ಸ್ಥಿತಿ ಬಗ್ಗೆ ಸರಿಯಾದ ಮಾಹಿತಿ ಸಿಗದ ಹಿನ್ನಲೆ ಖಿನ್ನತೆಗೆ ಒಳಗಾಗಿರುವ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದನು.
ಅದೇ ಒತ್ತಡದಲ್ಲಿ ಈ ಯುವಕ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬೆಳಗ್ಗೆ ಐದು ಗಂಟೆ ಸುಮಾರಿಗೆ ಆಸ್ಪತ್ರೆಯ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಾಯಿ ಮುಖ ನೋಡಲು ಬಿಟ್ಟಿರಲಿಲ್ಲ ಹೀಗಾಗಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೋರೋನಾ ಸೊಂಕಿತ ತಾಯಿಯ ಮುಖ ನೋಡಲು ಆಸ್ಪತ್ರೆ ಒಪ್ಪಿಕೊಂಡ ಬಳಿಕ ಯುವಕ ಆಸ್ಪತ್ರೆ ಕಟ್ಟಡದಿಂದ ಕೆಳಗಿಳಿದಿದ್ದಾನೆ. ಆ ನಂತರ ಆತನಿಗೆ ತನ್ನ ತಾಯಿಯ ಮುಖ ನೋಡಲು ಅವಕಾಶ ಸಿಕ್ಕಿದೆ.