ಉಜಿರೆಯಲ್ಲಿ ಪಾಕ್ ಪರ ಘೋಷಣೆ | ದೇಶದ್ರೋಹಿ ಆರೋಪಿಗಳಿಗೆ ಜಾಮೀನು
ಉಜಿರೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿದ್ದವರಿಗೆ ಇದೀಗ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ.
ಅಂಡು ಬಂಧಿತರಾಗಿದ್ದ ದಾವೂದು ಗುರುವಾಯನಕೆರೆ, ಇಸಾಕ್ ಸುನ್ನತ್ ಕೆರೆ, ಹರ್ಷದ್ ಸುನ್ನತ್ ಕೆರೆ ಎಂಬವರಿಗೆ ಜಾಮೀನು ಮಂಜೂರಾಗಿದೆ.
ಕಳೆದ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ವೇಳೆ, ಡಿಸೆಂಬರ್ 30 ರಂದು, ಉಜಿರೆಯ ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಮತ್ತು ಎಸ್ಡಿಪಿಐ ಕಾರ್ಯಕರ್ತರು ಒಂದೇ ಕಡೆ ಜಮಾಯಿಸಿದ್ದರು. ಈ ವೇಳೆ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಕಾಣುತ್ತಿದ್ದಂತೆ ವಿವಿಧ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿಕೊಳ್ಳುತ್ತಿದ್ದರು. ಈ ವೇಳೆ ಪಾಕ್ ಪರ ಘೋಷಣೆ ಕೇಳಿ ಬಂದಿದೆ ಎಂದು ಆರೋಪಿಸಲಾಗಿತ್ತು. ವಿಡಿಯೋ ಒಂದರಲ್ಲಿ ಪಾಕಿಸ್ತಾನ ಪರ ಘೋಷಣೆ ಇದ್ದು, ಅದು ದೇಶದ್ರೋಹದ ಪ್ರಕರಣವಾಗಿ ಪ್ರಕರಣ ದಾಖಲಾಗಿತ್ತು.
ಇದೀಗ 110 ದಿನಗಳ ನಂತರ ಆರೋಪಿಗಳು ಹೊರಬಂದಿದ್ದಾರೆ. ಸೆಷನ್ಸ್ ಕೋರ್ಟ್ ಆರೋಪಿಗಳನ್ನು ಬಂಧ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.