ಲಾಕ್ಡೌನ್ ಆದರೆ ಬಾಜೆಲ್ಗೆ ಕಷ್ಟ ಆದೀತು ಎಂದು ಪೂರ್ವತಯಾರಿ | ಅಕ್ರಮ ಕಳ್ಳಬಟ್ಟಿ ತಯಾರಿ ಸ್ಥಳಕ್ಕೆ ಅಬಕಾರಿ ದಾಳಿ, ಆರೋಪಿ ಪರಾರಿ
ವಾರಾಂತ್ಯ ಲಾಕ್ಡೌನ್ ಈಗಾಗಲೇ ಘೋಷಣೆಯಾಗಿದೆ. ಮುಂದಕ್ಕೆ ಪೂರ್ತಿ ಲಾಕ್ಡೌನ್ ಘೋಷಣೆಯಾದರೆ ಬಾಜೆಲ್ ಗೆ ಏನು ಮಾಡಬಹುದೆಂದು ಹಲವರು ಲೆಕ್ಕ ಹಾಕಲು ಶುರು ಮಾಡಿದ್ದಾರೆ.
ಕಳೆದ ಬಾರಿ ಲಾಕ್ಡೌನ್ ನಿಂದ ಹಲವೆಡೆ ಮದ್ಯಕ್ಕೆ ತಡಕಾಡಿದವರೂ ಇದ್ದಾರೆ. ಕದ್ದು ಮುಚ್ಚಿ ಗೋಂಕು, ಪೈನಾಪಲ್, ಹಲಸಿನ ಹಣ್ಣಿನಿಂದ ಚೈತನ್ಯ ಪಾನೀಯ ತಯಾರಿಸಿ ಮಾರಿ ದುಡ್ಡು ಮಾಡಿದವರೂ ಇದ್ದಾರೆ.
ಹಾಗೆಯೇ ಏನೋ, ಪಂಜ ಸಮೀಪದ ಕೇನ್ಯದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದ ವೇಳೆ ಅಬಕಾರಿ ದಳ ಅಧಿಕಾರಿಗಳು ದಾಳಿ ನಡೆಸಿದ್ದಾಗ ಗೊಂಕುದ ಕಷಾಯ ಪತ್ತೆಯಾಗಿವೆ.
ಕೇನ್ಯ ಗ್ರಾಮದ ಕೆಮ್ಮಟೆ ಎಂಬಲ್ಲಿ ಈ ಗೊಂಕುದ ಗಂಗಸರ ತೆಗೆಯುವ ಅಡ್ಡೆಗೆ ಅಬಕಾರಿ ಇಲಾಖೆಯವರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ 10 ಬಾಟಲಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ಗೇರು ಹಣ್ಣಿನಿಂದ ತಯಾರಿಸಿದ 10 ಲೀ. ಸಾರಾಯಿ ಪತ್ತೆಯಾಗಿದೆ.
ಈ ಸಂದರ್ಭ ಆರೋಪಿ ಕೆಮ್ಮಟೆ ಸುಂದರ ಗೌಡ ಎಂಬವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ದಾಳಿ ವೇಳೆ ಅಬಕಾರಿ ದಳದ ನಿರೀಕ್ಷಕ ಸಿದ್ದಪ್ಪ ಮೇಟಿ, ಹಾಗೂ ಸಿಬ್ಬಂದಿಗಳಾದ ಮಲ್ಲಣ್ಣ ಗೌಡ, ರಘುನಾಥ ಬಜಂತ್ರಿ, ಅಶೋಕ್ ಹಾಗೂ ಶರಣಪ್ಪ ಕಾರ್ಯಚರಣೆ ತಂಡದಲ್ಲಿದ್ದರು.