ಕೋವಿಡ್ ಹೆಚ್ಚಳ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧ

ಕಡಬ : ಕೋವಿಡ್ -19 ತೀವ್ರವಾಗಿ ಹೆಚ್ಚಿರುವುದರಿಂದ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಆದೇಶದ ಮೇರೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಸರಕಾರದ ಆದೇಶದಂತೆ ದೇವರ ದರ್ಶನ, ಸೇವೆಗಳು, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ವಿಶೇಷ ಉತ್ಸವ ಗಳನ್ನು ನಿರ್ಬಂಧಿಸಿದೆ. ದೇವಳದ ವಸತಿ ಗೃಹ, ಅತಿಥಿ ಗೃಹಗಳನ್ನು ಭಕ್ತರಿಗೆ ನೀಡಲಾಗುವುದಿಲ್ಲ. ಆದರೆ ಸಂಪ್ರದಾಯ ಪ್ರಕಾರ ದಿನಂಪ್ರತಿ ನಡೆಯುವ ವೈದಿಕ ವಿಧಿ ವಿಧಾನಗಳು, ಪಂಚಪರ್ವ ಉತ್ಸವಗಳು ಅರ್ಚಕರ ನೇತೃತ್ವದಲ್ಲಿ ನಡೆಯಲಿದೆ.

ಸಂಬಂಧಪಟ್ಟ ಸಿಬ್ಬಂದಿ ಮಾತ್ರ ಭಾಗವಹಿಸಬಹುದು. ಸಾರ್ವಜನಿಕ ಭಕ್ತರಿಗೆ ಇದರಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Leave A Reply

Your email address will not be published.