ಭೂಮಿ ಸುಪೋಷಣೆ ಹಾಗೂ ಸಂರಕ್ಷಣೆಗಾಗಿ ರಾಷ್ಟ್ರ ಮಟ್ಟದ ಜನ ಅಭಿಯಾನದ ಪುತ್ತೂರು ಯೋಜನಾ ಬೈಠಕ್

ಭೂಮಿ ಸುಪೋಷಣೆ ಹಾಗೂ ಸಂರಕ್ಷಣೆಗಾಗಿ ರಾಷ್ಟ್ರ ಮಟ್ಟದ ಜನ ಅಭಿಯಾನದ ಪುತ್ತೂರು ಯೋಜನಾ ಬೈಠಕ್(ದಕ್ಷಿಣ ಕನ್ನಡ ಜಿಲ್ಲೆ) ಯಲ್ಲಿ ನಿನ್ನೆ ಎಪ್ರಿಲ್ 20, ಮಂಗಳವಾರ ಸಂಜೆ 4 ಗಂಟೆಗೆ ಎಪಿಎಂಸಿ ಸಭಾಂಗಣ ಪುತ್ತೂರಿನಲ್ಲಿ ನಡೆಯಿತು. ಅಭಿಯಾನದ
ರಾಜ್ಯ ಸಂಚಾಲಕರಾಾಾದ ಅರುಣ್ ಕುಮಾರ್ ತೀರ್ಥಹಳ್ಳಿ ಅಭಿಯಾನ ದ ಮಾಹಿತಿ ನೀಡಿದರು.

ಸಾವಯವ, ಗೋ ಆಧಾರಿತ ಕೃಷಿ ತರಬೇತಿ
ಕೃಷಿ ವಿಚಾರವನ್ನು ಕೇಂದ್ರ ಮಾಡಿ ಗ್ರಾಮೋತ್ಸವ
ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯಕ್ರಮ,
ನಮ್ಮ ಮನೆಗೆ ಬರುವ ಆಹಾರದ ಬಗ್ಗೆ ಅರಿವು,
ನಮ್ಮ ಗ್ರಾಮದಲ್ಲಿ 100% ಸಾವಯವ ಕೃಷಿಕರ ಪಟ್ಟಿ ಮಾಡುವುದು ಇತ್ಯಾದಿ ಸಲಹೆ ನೀಡಿದರು.
ನಾನು ಭೂಮಿ ತಾಯಿ ಬಗ್ಗೆ, ಏನು ಯೋಚನೆ ಮಾಡುತ್ತೇನೆ ಅನ್ನೋದು ಮುಖ್ಯ ಅಂದರು.

ಪ್ರಾಂತ ಸಹ ಸೇವಾ ಪ್ರಮುಖ್ ನ. ಸೀತಾರಾಮ, ತಾಲೂಕು ಸಮಾವೇಶಗಳ ಯೋಜನೆ ಬಗೆಗೆ ವಿವರಣೆಯನ್ನು ನೀಡಿದರು.
ಭೂಮಿ ಪೂಜಾ ಉತ್ಸವ ಭಾವನಾತ್ಮಕವಾಗಿ ಮಾಡುವುದು ಮುಖ್ಯ ಎಂದರು.

ಬೈಠಕ್ ದಿನಾಂಕ ಹಾಗೂ ಸ್ಥಳ ನಿಗದಿ

ಕಡಬ-.ಮೇ2, ಮಧ್ಯಾಹ್ನ 3 ಗಂಟೆಗೆ.ಸಿ.ಎ.ಬ್ಯಾಂಕ್.

ಸುಳ್ಯ-30 ಬೆಳಿಗ್ಗೆ 10ಗಂಟೆ, ಸಿ ಎ ಬ್ಯಾಂಕ್.

ಪುತ್ತೂರು- ಎಪ್ರಿಲ್ 27 ,ಸಂಜೆ 4ಗಂಟೆ, ಪಂಚವಟಿ.

ಬಂಟ್ವಾಳ-ಎಪ್ರಿಲ್ 27, ಸಂಜೆ 4ಗಂಟೆ, ಕಾರ್ಯಾಲಯ ಬಿ ಸಿ ರೋಡ್ ನಲ್ಲ ಬೈಠಕ್ ದಿನಾಂಕ ಹಾಗೂ ಸ್ಥಳ ನಿಗದಿಪಡಿಸಲಾಯಿತು.
ಜಿಲ್ಲಾ ಕಾರ್ಯವಾಹ ವಿನೋದ್ ಕೊಡ್ಮಣ್ ಉಪಸ್ಥಿತರಿದ್ದರು.
ಅಭಿಯಾನದ ಜಿಲ್ಲಾ ಸಂಚಾಲಕ ಪ್ರಕಾಶ್ ಕೈಕಾರ್ ಪರಿಚಯಿಸಿದರು.
ಪ್ರಾಂತ ಗೋಸೇವಾ ಸಂಯೋಜಕ್ ಪ್ರವೀಣ ಸರಳಾಯ, ಪುತ್ತೂರು ಜಿಲ್ಲಾ: ಪ್ರಚಾರಕ್ ರೋಹಿತ್, ಸಹ ಕಾರ್ಯವಾಹ ಡಾಕ್ಟರ್ ಮನೋಜ್, ಪರ್ಯಾವರಣ ಗತಿವಿಧಿ ಸಂಯೋಜಕ್ ಕಮಲಾಕ್ಷ, ಗೋ ಸೇವಾ ಸಂಯೋಜಕ್ ಪ್ರಕಾಶ್ ಕೈ ಕಾರ್, ಅಭಿಯಾನದ ಜಿಲ್ಲಾ ಸಹ ಸಂಯೋಜಕ ಶೇಖರ ಮರ್ಧಾಳ, ಸಹಕಾರ ಭಾರತಿ : ರಾಜ್ಯ ಅಧ್ಯಕ್ಷ ಸತೀಶ್ಚಂದ್ರ ಎಸ್ ಆರ್, ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಪುತ್ತೂರು ತಾಲೂಕು ಕಾರ್ಯದರ್ಶಿ ರಮೇಶ್ ಕಲ್ಪುರೆ; ಭಾರತೀಯ ಕಿಸಾನ್ ಸಂಘದ ವಿಭಾಗ ಸಂಘಟನಾ ಕಾರ್ಯದರ್ಶಿ ಮೂಲಚಂದ್ರ ಮೊದಲಾದವರು ಉಪಸ್ಥಿತರಿದ್ದರು. 4 ರೆವಿನ್ಯೂ ತಾಲ್ಲೂಕುಗಳಿಂದ 35 ಮಂದಿ ಉಪಸ್ಥಿತರಿದ್ದರು.

Leave A Reply

Your email address will not be published.