ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ರ ವರೆಗೆ ವೀಕೆಂಡ್ ಕರ್ಫ್ಯೂ, ಪ್ರತಿದಿನ ನೈಟ್ ಕರ್ಫ್ಯೂ

Share the Article

ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಈ ಕುರಿತು ಮಾತನಾಡಿದ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್, ಕೋವಿಡ್ ನಿಯಂತ್ರಣಕ್ಕೆ ನಾಳೆಯಿಂದ ಮುಂದಿನ 14 ದಿನಗಳಿಗೆ ಅನ್ವಯವಾಗುವಂತೆ ಕಠಿನ ಮಾರ್ಗಸೂಚಿ ಜಾರಿಮಾಡಲಾಗಿದೆ ಎಂದರು.

ಮುಖ್ಯಾಂಶಗಳು

ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯಾದ್ಯಂತ ವೀಕೆಂಡ್ ಕರ್ಪ್ಯೂ ಜಾರಿ.

ಈ ಸಂದರ್ಭದಲ್ಲಿ ಮುಂಜಾನೆ 6 ರಿಂದ 10 ಗಂಟೆಯವರೆಗೆ ಮಾತ್ರ ಖರೀದಿ ಮಾಡಲು ಅವಕಾಶ

ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲಿಗೆ ಮಾತ್ರ ಅವಕಾಶ

ನಾಳೆಯಿಂದ ಮೇ 4ರ ವರೆಗೆ ಹೊಸ ರೂಲ್ಸ್ ಅನ್ವಯ

ಮಾಲ್, ಸಿನೇಮಾ ಥಿಯೇಟರ್, ಜಿಮ್ ಎಲ್ಲವೂ ಬಂದ್

ಶಾಲೆ ಕಾಲೇಜುಗಳು ಸಂಪೂರ್ಣ ಬಂದ್

ರಾತ್ರಿ ಕರ್ಫ್ಯೂ ಜಾರಿಯಾಗಲಿದೆ

ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರಗೆ ಸಂಪೂರ್ಣ ಬಂದ್

ಹೊಟೆಲ್ ಗಳಲ್ಲಿ ಶೇ.50 ರಷ್ಟು ಸೀಟ್ ಮಾತ್ರ ಅವಕಾಶ

ರಾತ್ರಿ 9 ಗಂಟೆ ಮೇಲೆ ಅಗತ್ಯ ವಸ್ತು ಬಿಟ್ಟು ಎಲ್ಲ ಬಂದ್್

Leave A Reply