ಅಡುಗೆ ಗ್ಯಾಸ್ ಸಿಲಿಂಡರ್ ನಿಂದ ದಾರಿ ಮಧ್ಯೆ ಗ್ಯಾಸ್ ಕಳ್ಳತನ | ಓರ್ವನ ಬಂಧನ, ಮತ್ತೊಬ್ಬನಿಗಾಗಿ ಶೋಧ
ಗ್ಯಾಸ್ ಏಜೆನ್ಸಿಯ ಡೆಲಿವರಿ ಸಿಬಂದಿಯೋರ್ವ ಡೆಲಿವೆರಿ ಮಾಡಬೇಕಾಗಿದ್ದ ಗ್ಯಾಸ್ ಸಿಲಿಂಡರ್ ನಿಂದ ಅನಿಲ ಕದ್ದು ಬೇರೆ ಖಾಲಿ ಸಿಲಿಂಡರಿಗೆ ತುಂಬಿಸಿ ಮಾರಾಟ ಮಾಡುತ್ತಿದ್ದುದ್ದನ್ನು ಗ್ರಾಮಸ್ಥರು ಪತ್ತೆ ಹಚ್ಚಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳದ ಕಾವಳಪಡೂರು ಗ್ರಾಮದ ಅಲಂಪುರಿ ಎಂಬಲ್ಲಿ ನಡೆದಿದೆ.
ಬಂಧಿತನನ್ನು ರಾಜಸ್ಥಾನದ ಜೋಧ್ ಪುರದ ಕಾರ್ಮಿಕ ಜಯಪ್ರಕಾಶ್ (22) ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.
ಇವರು ರಾತ್ರಿ ಹೊತ್ತಿನಲ್ಲಿ ಡೆಲಿವರಿ ಮಾಡಲು ರೆಡಿಯಾಗಿರುವ ಸಿಲಿಂಡರ್ ನಿಂದ ಅನಿಲವನ್ನು ಇನ್ನೊಂದು ಸಿಲಿಂಡರ್ ಗೆ ಬಗ್ಗಿಸುತ್ತಿದ್ದರು. ಅಲ್ಲಿಂದ ಒಂದಷ್ಟು ಕೆಜಿ ಗ್ಯಾಸ್ ಅನ್ನು ಇನ್ನೊಂದು ಖಾಲಿ ಸಿಲಿಂಡರಿಗೆ ಗ್ಯಾಸ್ ತುಂಬಿಸಿ ಮಾರಾಟ ಮಾಡುತ್ತಿದ್ದರು. ತಮಗೆ ಡೆಲಿವರಿ ಮಾಡಲ್ಪಡುವ ಸಿಲಿಂಡರಿನ ತೂಕದ ಬಗ್ಗೆ ಗ್ರಾಮಸ್ಥರಿಗೆ ಈಗಾಗಲೇ ಅನುಮಾನವಿತ್ತು. ಮೊನ್ನೆ ಅನುಮಾನಗೊಂಡ ಗ್ರಾಮಸ್ಥರು ಕಾದು ಕುಳಿತಿದ್ದಾರೆ. ಅಂದು ಗುಡ್ಡವೊಂದರ ನಿರ್ಜನ ಜಾಗದಲ್ಲಿ ಆ ಇಬ್ಬರು ಫುಲ್ ಸಿಲಿಂಡರ್ ಕೆಳಕ್ಕೆ ಇಳಿಸಿ ಖಾಲಿ ಸಿಲಿಂಡರಿಗೆ ಗ್ಯಾಸ್ ಬಗ್ಗಿಸಲು ಹೊರಟಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡಾಗಿ ಲಾಕ್ ಆಗಿದ್ದಾರೆ.
ಅವರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು ಇನ್ನೊಬ್ಬ ತಪ್ಪಿಸಿಕೊಂಡಿದ್ದಾನೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.