ಹಾಸನದಲ್ಲಿ ರೇವ್ ಪಾರ್ಟಿ ,ಮಂಗಳೂರಿನ ಲೇಡಿ ಪೊಲೀಸ್ & ಸನ್ ಸೂತ್ರಧಾರಿ | ಲೇಡಿ ಪೊಲೀಸ್ ಅಂದರ್

ಹಾಸನ ಜಿಲ್ಲೆಯ ಆಲೂರು ಬಳಿಯ ಹೊಂಗರವಳ್ಳಿಯ ಎಸ್ಟೇಟ್ ಒಂದರಲ್ಲಿ ,ಪೊಲೀಸರ ಕಣ್ಣು ತಪ್ಪಿಸಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಪೊಲೀಸರು ರೈಡ್ ಮಾಡಿ 131 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದರು.

ಈ ಪಾರ್ಟಿಯಲ್ಲಿ ಮಂಗಳೂರು ಮತ್ತು ಬೆಂಗಳೂರಿನ ಯುವಕ- ಯುವತಿಯರು ಡ್ರಗ್ಸ್ ಸೇವಿಸಿ ಕುಣಿದು ಕುಪ್ಪಳಿಸುತ್ತಿದ್ದು ಬೆಳಕಿಗೆ ಬಂದಿತ್ತು.

ಈಗ ತನಿಖೆ ಮುಂದುವರೆಸಿರುವ ಪೊಲೀಸರಿಗೆ ಈ ಗಮ್ಮತ್ನನ್ನು ಎರೇಂಜ್ ಮಾಡಿದ್ದು
ಮಂಗಳೂರಿನ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಮತ್ತು ಆಕೆಯ ಪುತ್ರ ಎಂದು ತಿಳಿದು ಬಂದಿದೆ.

ರೇವ್ ಪಾರ್ಟಿಯ ಕುರಿತು ಮಾಹಿತಿ ಪಡೆದು ಕೊಂಡಿದ್ದ ಹಾಸನ ಎಸ್ಪಿ ಶ್ರೀನಿವಾಸ ಗೌಡ ಅವರು 50ಕ್ಕೂ ಹೆಚ್ಚು ಪೊಲೀಸ್ ಸಿಬಂದಿಯೊಂದಿಗೆ ದಾಳಿ ನಡೆಸಿ,ಜನರನ್ನು ವಶಕ್ಕೆ ಪಡೆದುಕೊಂಡಿದ್ದರು.

ಈ ವೇಳೆ ಪಾರ್ಟಿಯ ಅಮಲಿನಲ್ಲಿದ್ದ 131 ಮಂದಿಯನ್ನು ವಶಕ್ಕೆ ಪಡೆದಿದ್ದರು. ಇವರ ಪೈಕಿ ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಅಂಡ್ ಇಕನಾಮಿಕ್ ಕ್ರೈಮ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಒಬ್ಬರು.

ಪಾರ್ಟಿ ಆಯೋಜಿಸಿದ್ದ ಜಾಗದಲ್ಲಿ ಎಂಡಿಎಂಎ, ಎಲ್ಎಸ್ ಡಿ, ಗಾಂಜಾ ಇನ್ನಿತರ ಮಾದಕ ದ್ರವ್ಯಗಳು ಪತ್ತೆಯಾಗಿದ್ದವು. ಎಸ್ಟೇಟ್ ಮಾಲೀಕ ಎನ್ನಲಾಗಿದ್ದ ಗಗನ್ ಮತ್ತು ಪಾರ್ಟಿ ಆಯೋಜಿಸಿದ್ದಾರೆ ಎನ್ನಲಾದ ಬೆಂಗಳೂರಿನ ಸೋನಿ, ಪಂಕಜ್, ನಾಸಿರ್ ಎಂಬ ಮೂವರನ್ನು ಬಂಧಿಸಲಾಗಿತ್ತು.

ತನಿಖೆಯ ಬಳಿಕಮಂಗಳೂರಿನ ಲೇಡಿ ಪೊಲೀಸ್ ಶ್ರೀಲತ ಮತ್ತು ಆಕೆಯ ಪುತ್ರನ ಹೆಸರು ಬೆಳಕಿಗೆ ಬಂದಿದೆ.

ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿರುವ ಶ್ರೀಲತಾ ಪಣಂಬೂರು, ಸುರತ್ಕಲ್, ಬಜ್ಪೆಯಲ್ಲಿ ಕೆಲಸ ಮಾಡಿದ್ದರು.ಈಚಿನ ನಾಲ್ಕು ವರ್ಷದಿಂದ ನಾರ್ಕೋಟಿಕ್ ಠಾಣೆಯಲ್ಲಿದ್ದರು.

ಈ ನಡುವೆ, ಮಂಗಳೂರಿನ ಕೆಲವು ಯುವಕರ ಜೊತೆ ನಂಟು ಬೆಳೆಸಿಕೊಂಡಿದ್ದ ಈಕೆಯೇ ಇದೀಗ ಹಾಸನದಲ್ಲಿ ಪೊಲೀಸರ ಕಣ್ಣುತಪ್ಪಿಸಿ ರೇವ್ ಪಾರ್ಟಿ ಆಯೋಜನೆ ಮಾಡಿ ಸಿಕ್ಕಿಬಿದ್ದಿದ್ದಾರೆ.

Leave A Reply

Your email address will not be published.