ಉದ್ದನೆಯ ಕೇಶರಾಶಿಗಾಗಿ ಗಿನ್ನೆಸ್ ದಾಖಲೆ ಹೊಂದಿದ್ದ ಈ ಹುಡುಗಿಯ ಕೂದಲಿಗೆ ಬಿದ್ದಿದೆ ಕತ್ತರಿ | ಅಷ್ಟಕ್ಕೂ ಆಕೆಯ ತಲೆಕೂದಲ ಉದ್ದ ಕೇಳಿದ್ರೆ ನೀವು ಅಸೂಯೆ ಪಡ್ತೀರ !
ಮೂರು ವರ್ಷಗಳ ಹಿಂದೆ ಉದ್ದನೆಯ ಕೂದಲುಗಾಗಿ, ಹದಿಹರೆಯದವರ ವಿಭಾಗದಲ್ಲಿ ಗಿನ್ನೆಸ್ ವಿಶ್ವ ದಾಖಲೆ ಪ್ರಶಸ್ತಿಯನ್ನು ಗೆದ್ದ ಗುಜರಾತ್‌ನ ಮೊಡಾಸಾದ ನೀಲಾಂಶಿ ಪಟೇಲ್ ಅಂತಿಮವಾಗಿ 12 ವರ್ಷಗಳ ನಂತರ ಮೊದಲ ಬಾರಿಗೆ ಕೂದಲನ್ನು ಕತ್ತರಿಸಿಕೊಂಡಿದ್ದಾಳೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, 2018 ರಲ್ಲಿ ಮೇಲೆ ನೀಲಾಂಶಿ ಪಟೇಲ್ ಇದುವರೆಗೆ ಉದ್ದವಾದ ಕೂದಲಿಗೆ ಪ್ರಶಸ್ತಿಯನ್ನು ಗೆದ್ದಿದ್ದರು. ಆಗ ಆಕೆಗೆ 16 ವರ್ಷ, ಮತ್ತು ಅವಳ ಕೂದಲು 170.5 ಸೆಂಟಿಮೀಟರ್ ಉದ್ದವಿತ್ತು. ಆ ನಂತರ ಕೂಡ ಹುಡುಗಿ ತನ್ನ ಕೂದಲನ್ನು ಬೆಳೆಸಿದ್ದಳು. ಆಕೆಯ 18 ನೇ ವರ್ಷದ ಹುಟ್ಟುಹಬ್ಬದ ಮೊದಲು ಜುಲೈ 2020 ರಲ್ಲಿ ಕೊನೆಯ ಬಾರಿಗೆ ಆಕೆ ತನ್ನ ಕೂದಲನ್ನು ಅಳೆದಾಗ ಅದು ಬರೋಬ್ಬರಿ 200 ಸೆಂಟಿಮೀಟರ್ ಅಂದರೆ ಸುಮಾರು ಆರು ಮುಕ್ಕಾಲು ಅಡಿಗಳಷ್ಟು ಉದ್ದ ತಲುಪಿತ್ತು. ಆ ಮೂಲಕ ಮತ್ತೊಮ್ಮೆ ಈ ಅಪ್ರತಿಮ ಪ್ರಶಸ್ತಿಯನ್ನು ಆಕೆ ತನ್ನದೇ ಹೆಸರಿನಲ್ಲಿ ಉಳಿಸಿಕೊಂಡದ್ದಲ್ಲದೆ, ಮತ್ತಷ್ಟು ಇಂಪ್ರೂವ್ ಮಾಡಿಕೊಂಡಿದ್ದಾಳೆ.
ಆದರೆ ಈಗ, ಗುಜರಾತ್‌ನ ಈ ಹುಡುಗಿಯ ಕೂದಲಿಗೆ ಕತ್ತರಿ ತಾಗಿದೆ. ನೀಲಾಂಶಿ ತಾನು ಇಷ್ಟು ದಿನ ಜತನದಿಂದ ಕಾಪಾಡಿಕೊಂಡು ಬಂದಿದ್ದ, ಪ್ರೀತಿಯಿಂದ ಸಾಕಿದ್ದ ಕೂದಲನ್ನು ಕತ್ತರಿಸಿಕೊಂಡಿದ್ದಾರೆ.
ನೀಲಾಂಶಿ ತನ್ನ ಆರು ವರ್ಷದವಳಿದ್ದಾಗ ಕೂದಲನ್ನು ಬೆಳೆಯಲು ಪ್ರಾರಂಭಿಸಿದಳು. ಸಲೂನ್ ಒಂದರಲ್ಲಿ ಆಕೆಗೆ ಆದ ಅಹಿತಕರ ಘಟನೆಯೇ ಆಕೆ ಕೂದಲು ಬೆಳೆಸುವಂತಾಗಿತ್ತು.
“ನಾನು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಸ್ವಲ್ಪ ಹೆದರುತ್ತೇನೆ. ಏಕೆಂದರೆ ಹೊಸ ಕೇಶವಿನ್ಯಾಸದಲ್ಲಿ ನಾನು ಹೇಗೆ ಕಾಣುತ್ತಿದ್ದೇನೆ ಎಂದು ನನಗೆ ತಿಳಿದಿಲ್ಲ. ಆದ್ದರಿಂದ, ಏನಾಗುತ್ತದೆ ಎಂದು ನೋಡೋಣ, ಆದರೆ ಇದು ಅದ್ಭುತವಾಗಲಿದೆ ಎಂದು ನಾನು ಭಾವಿಸುತ್ತೇನೆ ”ಎಂದು ನೀಲಾಂಶಿ ತನ್ನ ಕ್ಷೌರಕ್ಕೆ ಸ್ವಲ್ಪ ಮೊದಲು ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
“ನನ್ನ ಕೂದಲು ನನಗೆ ಬಹಳಷ್ಟು ನೀಡಿದೆ. ಆದರೆ ಅದನ್ನು ಕತ್ತರಿಸುವ ಸಮಯ. ‘ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ, ಓ ನನ್ನ ಸ್ನೇಹಿತ’ ಎಂದು ”ನೀಲಾಂಶಿ ತನಗೆ ಈ ಮಟ್ಟಿಗಿನ ಹೆಸರು ತಂದುಕೊಟ್ಟ ಕೂದಲಿಗೆ ಧನ್ಯವಾದ ಹೇಳಿದ್ದಾಳೆ.
ಅವರ ತಾಯಿ ಕಮಿನಿಬೆನ್ ಅವರು ಆಕೆಯ ಕೂದಲನ್ನು ಮ್ಯೂಸಿಯಂಗೆ ದಾನ ಮಾಡಲು ಸೂಚಿಸಿದರೂ, ಆಕೆ ಮಾತ್ರ ಅದನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವುದಾಗಿ ಹೇಳಿದ್ದಾಳೆ.
ವೀಡಿಯೊವನ್ನು ಇಲ್ಲಿ ನೋಡಿ:
https://www.instagram.com/reel/CNpBuhNBUwF/?utm_source=ig_embed&utm_campaign=loading