ಬಳಕೆ ಮಾಡಿ ಬಿಸಾಡಿದ ಮಾಸ್ಕ್ ತುಂಬಿಸಿ ಹಾಸಿಗೆ ತಯಾರಿಕೆ | ಬೆಡ್ ತಯಾರಿಕಾ ಮುಖ್ಯಸ್ಥನನ್ನು ಬಂಧಿಸಿದ ಪೊಲೀಸರು
ಮುಂಬೈ ನಲ್ಲಿ ಬಳಕೆಯಾದ ಮಾಸ್ಕ್ ಗಳಿಂದ ಹಾಸಿಗೆ ತಯಾರಿಸುತ್ತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮಾಸ್ಕ್ ನ ಹಾಸಿಗೆ ತಯಾರಕನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಹಾರಾಷ್ಟ್ರದ ಜಲ್ ಗಾಂವ್ ನ ಕುಸುಂಭ ನಾಕಾದಲ್ಲಿ ಬಳಸಿ ಬಿಸಾಡಿದ ಇಂತಹ ಮಾಸ್ಕ್ ಗಳನ್ನು ಸಂಗ್ರಹಿಸಲಾಗುತಿತ್ತು. ಆ ನಂತರ ಅವುಗಳನ್ನು ಬಳಸಿ ಹಾಸಿಗೆಗಳನ್ನು ತಯಾರಿಸಲಾಗುತ್ತಿತ್ತು. ಬಳಕೆಯಾದ ಮಾಸ್ಕಗಳನ್ನು ತುಂಬಿ ಹಾಸಿಗೆ ತಯಾರಿಸುತ್ತಿದ್ದರು. ಇದರ ಮಾಹಿತಿ ಪಡೆದ ಪೊಲೀಸರು ಅಂಗಡಿಯ ಮೇಲೆ ದಾಳಿ ನಡೆಸಿದ್ದು, ಜಲ್ ಗಾಂವ್ ನ ಆಜಾದ್ ನಗರ ನಿವಾಸಿ ಅಂಗಡಿ ಮಾಲೀಕ ಅಮ್ಮದ್ ಅಹ್ಮದ್ ಮನ್ಸೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆ ಮತ್ತಿತರ ಕಡೆಗಳಿಂದ ಈ ಮಾಸ್ಕ್ ಗಳನ್ನು ಸಂಗ್ರಹಿಸಿ ತರಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.