ತನ್ನ ರೆಸ್ಟೋರೆಂಟ್ ದರೋಡೆ ಮಾಡಿದವನಿಗೇ ಜಾಬ್ ಆಫರ್ ಕೊಟ್ಟು ಹೃದಯವಂತಿಕೆ ಮೆರೆದ ರೆಸ್ಟೋರೆಂಟ್ ಮಾಲೀಕ

ಇದು ತನ್ನ ಅಂಗಡಿಯನ್ನು ದರೋಡೆ ಮಾಡಿ ಕದ್ದುಕೊಂಡು ಹೋದ ಕಳ್ಳನನ್ನು ಕ್ಷಮಿಸಿ ಆತನಿಗೆ ಕೆಲಸ ನೀಡುವ ಭರವಸೆ ನೀಡಿದ ಅಂಗಡಿ ಮಾಲೀಕನ ಕಾರ್ಯಕ್ಕೆ ವಿಶ್ವಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆತ ಮನೆಗೆ ಹೋಗುವಾಗ ರೆಸ್ಟೋರೆಂಟ್‌ ಬಾಗಿಲನ್ನು ಸರಿಯಾಗಿಯೇ ಲಾಕ್ ಮಾಡಿದ್ದಾರೆ. ಆದರೆ ಬೆಳಗ್ಗೆ ರೆಸ್ಟೋರೆಂಟ್ ಗೆ ಬಂದು ನೋಡಿದರೆ ಬಾಗಿಲು ಮುರಿದಿದೆ. ಕಿಡಕಿ ಗಾಜುಗಳು ಒಡೆದಿದೆ. ಯಾರೋ ಕಳ್ಳರು ರೆಸ್ಟೋರೆಂಟ್ ನುಗ್ಗಿದ್ದಾರೆ ಎಂಬುದು ಮಾಲೀಕನಿಗೆ ಪಕ್ಕಾ ಗೊತ್ತಾಗಿದೆ. ಇಷ್ಟಾದರೂ ಆ ಮಾಲೀಕ ಪೊಲೀಸರಿಗೆ ದೂರು ಕೊಡದೇ, ಕಳ್ಳನಿಗೆ ಕೆಲಸದ ಕೊಡಿಸುವ ಭರವಸೆ ನೀಡಿ ಹೃದಯವಂತಿಕೆ ಮೆರೆದಿದ್ದಾರೆ.

ಈ ಅಪರೂಪದ ಘಟನೆ ನಡೆದಿರುವುದು ಅಮೆರಿಕಾದ ಜಾರ್ಜಿಯಾದ ಅಗಸ್ಟಾದಲ್ಲಿ. ಅಲ್ಲಿನ ಯಾಬ್ಲೋಸ್‌ ಸೌತ್‌ವೆಸ್ಟ್‌ ಗ್ರಿಲ್ ರೆಸ್ಟೋರೆಂಟ್ ನಲ್ಲಿ ಕಳ್ಳತನ ನಡೆದಿದ್ದು, ಪೊಲೀಸರಿಗೆ ದೂರು ಕೊಡುವ ಬದಲು ಕಳ್ಳನಿಗೆ ಕೆಲಸದ ಆಫರ್ ಕೊಟ್ಟು ಹೃದಯವಂತಿಕೆ ಮೆರೆದಿದ್ದಾನೆ ಹೋಟೆಲ್ ನ ಮಾಲೀಕ ಕಾರ್ಲ್‌ ವ್ಯಾಲೇಸ್.

ಅಂಗಡಿಯ ಮಾಲೀಕ ಎಂದಿನಂತೆ ಎಷ್ಟು ಗಂಟೆಗೆ ಬಂದು ಬಾಗಿಲು ತೆಗೆಯುವಾಗ ಕಿಟಕಿ ಗಾಜುಗಳು ಪುಡಿಪುಡಿಯಾಗಿ ಬಿದ್ದಿದ್ದವು. ಆನಂತರ ರೆಸ್ಟೋರೆಂಟ್ ಸಿಸಿಟಿವಿಯನ್ನು ಗಮನಿಸಿದಾಗ ರೆಸ್ಟೋರೆಂಟ್ ಇನ್ ಒಳಗೆ ನುಗ್ಗಿ ಹಣವನ್ನು ಕೊಂಡೊಯ್ದಿರುವುದು ಪತ್ತೆಯಾಗಿದೆ. ತಕ್ಷಣಕ್ಕೆ ಅಂಗಡಿಯವನಿಗೆ ಕಳ್ಳನ ಮೇಲೆ ಕೋಪ ಬಂದಿದೆ. ಆದರೆ ಮರುಕ್ಷಣದಲ್ಲಿ, ಆತನಿಗೆ ಕಳ್ಳನ ಮೇಲೆ ಮರುಕ ಹುಟ್ಟಿದೆ. ಪಾಪ ಆ ಕಳ್ಳ ತನ್ನ ಕಷ್ಟದ ಬದುಕಿನ ಯಾವುದೋ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಲು ಈತ ಈ ಕೆಲಸ ಮಾಡಿರಬಹುದು ಎನಿಸಿದೆ. ಅದೇ ಕಾರಣಕ್ಕಾಗಿ ಆತನಿಗೆ ಕೆಲಸ ಕೊಡುವ ನಿರ್ಧಾರ ಮಾಡಿದೆ ಅಂತಾರೆ ಕಾರ್ಲ್‌ ವ್ಯಾಲೇಸ್.

ಕೆಲವರು ತಮ್ಮ ಜೀವನದ ಕೆಲವು ನಿರ್ಧಾರಗಳಿಂದ ಹೆಣಗಾಡುತ್ತಿರಬಹುದು ಅಥವಾ ಹಣದ ಸಮಸ್ಯೆಯಿಂದ ತೊಂದರೆಗೆ ಸಿಲುಕಿರಬಹುದು. “ದಯವಿಟ್ಟು ನಮ್ಮಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ. ನೀವು ಈಗ ಹಣ ಸಂಪಾದಿಸಲು ಮಾಡಿಕೊಂಡ ಆಯ್ಕೆಗಿಂತ ಉತ್ತಮ ಮಾರ್ಗಗಳಿಂದ ಹಣಗಳಿಸಬಹುದು. ಇಲ್ಲಿ ಯಾವುದೇ ಪೊಲೀಸ್ ಇಲ್ಲ, ಪ್ರಶ್ನೆಯಿಲ್ಲ. ಕುಳಿತು ಮಾತನಾಡೋಣ, ಬನ್ನಿ” ಎಂದು ಕಳ್ಳನಿಗೆ ಭರವಸೆ ಕೊಟ್ಟಿದ್ದಾರೆ ಆ ಹೋಟೆಲಿನ ರೆಸ್ಟೋರೆಂಟ್ ಮಾಲೀಕ.

ಇದೀಗ ಫೇಸ್ಬುಕ್ ನಲ್ಲಿ ಆತ ಕಳ್ಳನಿಗೆ ಕೆಲಸ ಕೊಡಿಸುವ ಪೋಸ್ಟ್ ಹಾಕುತ್ತಲೇ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕಾರ್ಲ್ ಹೃದಯವಂತಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ತಪ್ಪು ಮಾಡಿದವರಿಗೆ ತಿದ್ದಿಕೊಳ್ಳಲು ಅವಕಾಶ ನೀಡುವುದು ಒಳ್ಳೆಯ ಕೆಲಸ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇಂತಹ ನಿರ್ಧಾರ ಕೈಗೊಂಡ ರೆಸ್ಟೋರೆಂಟಿನ ಮಾಲೀಕರಿಗೆ ಅಭಿನಂದನೆ ಸಲ್ಲಿಸುತ್ತಾ ಕೆಲವರು, ‘ ತಾವು ಮುಂದಕ್ಕೆ ಇದೇ ರೆಸ್ಟೋರೆಂಟ್ ನಿಂದ ಆಹಾರ ತರಿಸಿ ಕೊಳ್ಳುವುದಾಗಿ ಮತ್ತು ವ್ಯಾಪಾರ ಮಾಡುವುದಾಗಿ ಹೇಳಿ, ಮಾಲಿಕನ ಒಳ್ಳೆಯತನವನ್ನು ನಾವೆಲ್ಲಾ ಬೆಂಬಲಿಸಬೇಕು ಎಂದು’ ಹೇಳಿದ್ದಾರೆ.

Leave A Reply

Your email address will not be published.