ಪುತ್ತೂರು | ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ವತಿಯಿಂದ ವಾರ್ಷಿಕ ಕ್ರೀಡಾಕೂಟ

ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ಪುತ್ತೂರು ಇದರ ವತಿಯಿಂದ ವಾರ್ಷಿಕ ಕ್ರೀಡಾಕೂಟವೂ ಸ.ಹಿ.ಪ್ರಾ ಶಾಲೆ ನೆಲ್ಲಿಕಟ್ಟೆ ಪುತ್ತೂರು ಇದರ ಮೈದಾನದಲ್ಲಿಂದು ನಡೆಯಿತು.

ಕ್ರೀಡಾಕೂಟದ ಕ್ರೀಡಾಂಗಣದ ಉದ್ಘಾಟನೆಯನ್ನು
ಭ್ರಷ್ಟಚಾರ ಮತ್ತು ಅಪರಾಧ ನಿಗ್ರಹ ತಡೆ ವಿಭಾಗದ ರಾಜ್ಯಧ್ಯಕ್ಷರಾದ ಪ್ರಶಾಂತ್ ರೈ ಮರವಂಜರವರು ನೆರವೇರಿಸಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ರವೀಂದ್ರನಾಥ ಶೆಟ್ಟಿ ನುಳಿಯಾಲು ನೆರವೇರಿಸಿದರು. ಅಧ್ಯಕ್ಷತೆಯನ್ನು ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟಿನ ತಾಲೂಕು ಅಧ್ಯಕ್ಷರಾದ ಹೇಮಂತ್ ಆರ್ಲಪದವು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಜಿಲ್ಲಾಧ್ಯಕ್ಷರಾದ ರಾಜು ಹೊಸ್ಮಠರವರು ಪ್ರಾಸ್ತವಿಕವಾಗಿ ಮಾತನಾಡಿದರು.

ಸಭಾ ಕಾರ್ಯಕ್ರಮದಲ್ಲಿ ಟ್ರಸ್ಟಿನ ಮುಖ್ಯಸ್ಥರಾದ ಜಗದೀಶ್ ಕಜೆ, ತುಳು ನಾಡ ರಕ್ಷಣಾ ವೇದಿಕೆಯ ಸುಳ್ಯ ತಾಲೂಕಿನ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಪ್ರವೀಣ ರೈ ಮರವಂಜ, ಶಾಂತಪ್ಪ ನರಿಮೊಗರು, ಕೇಶವ ಪಡೀಲ್, ಅಬುಬ್ಬಕ್ಕರ್ ಮುಲಾರ್, ರವಿ ಕಾರೆಕ್ಕಾಡು, ಕೆ.ಪಿ ಆನಂದ ಪಡುಬೆಟ್ಟು ಉಪಸ್ಥಿತರಿದ್ದರು.
ಕಾರ್ಯಕ್ರವನ್ನು ಸಾಗರ್ ಬೆಳ್ಳಾರೆ ನಿರ್ವಾಹಿಸಿದರು.

Leave A Reply

Your email address will not be published.