ಕೊರಗಜ್ಜನ ಕೋಲದ ಸಂದರ್ಭ ಕಲ್ಲು ತೂರಾಟ, ಹಫೀಜ್ ಎಂಬಾತನ ಬಂಧನ

ಉಳ್ಳಾಲದ ತೊಕ್ಕೊಟ್ಟು ಜಂಕ್ಷನ್ ಸಮೀಪ ಇರುವ ಕೊರಗಜ್ಜನ ಕೋಲ ನಡೆಯುವ ಸಂದರ್ಭ ನಡೆಯುತ್ತಿದ್ದ ಸಂದರ್ಭ ಕಲ್ಲುತೂರಾಟ ನಡೆದಿದೆ.

ಕೋಲ ನಡೆಯುತ್ತಿದ್ದಾಗ, ಅಲ್ಲೇ ಇರುವ ಬಿಲ್ಲಿಂಗ್ ಮೇಲೆ ನಿಂತು ಕಲ್ಲು ತೂರಲಾಗಿದೆ. ಆ ಕಲ್ಲು ಅಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಪಕ್ಕ ಬಂದು ಬಿದ್ದಿದೆ. ಆಗ ಅಲ್ಲಿ ನೆರೆದು ಕೋಲ ವೀಕ್ಷಿಸುತ್ತಿದ್ದ ನೂರಾರು ಮಂದಿ ಪೊಲೀಸರೊಂದಿಗೆ ಸೇರಿಕೊಂಡು ಕಲ್ಲು ತೂರಾಟ ನಡೆಸಿದ ವ್ಯಕ್ತಿಯನ್ನು ಹಿಡಿದಿದ್ದಾರೆ.

ಅಲ್ಲಿನ ಕೋಡಿ ನಿವಾಸಿ ಮಹಮ್ಮದ್ ಹಫೀಝ್ ಎಂಬಾತನೇ ಬಂಧಿತ ಆರೋಪಿ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕೊರಗಜ್ಜನ ಕೋಲ ಸ್ಥಳದ ಸಮೀಪದಲ್ಲೇ ಈ ಕೃತ್ಯ ನಡೆದಿರುವುದು, ಇದು ಕೋಮು ಸಾಮರಸ್ಯ ಕದಡಲು ಯತ್ನಿಸಿದ ಘಟನೆ ಎನ್ನಲಾಗಿದೆ. ಕಲ್ಲು ತೂರಾಟ ನಡೆದರೂ ಅಲ್ಲಿ ನೆರೆದಿದ್ದ ಭಕ್ತಾಧಿಗಳು ಸಂಯಮದಿಂದ ವರ್ತಿಸಿದ್ದಾರೆ.

1 Comment
  1. karunakara says

    byavarsi nayig pittinaye

Leave A Reply

Your email address will not be published.