ಬೆಳ್ತಂಗಡಿ | ವಿದ್ಯುತ್ ಕಂಬಕ್ಕೆ ರಿಕ್ಷಾ ಡಿಕ್ಕಿ, ಚಾಲಕ ಗಂಭೀರ

Share the Article

ಬೆಳ್ತಂಗಡಿ ತಾಲೂಕಿನ ಲಾಯಿಲ ಸಮೀಪ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ವಿಧ್ಯುತ್ ಕಂಬಕ್ಕೆ ಡಿಕ್ಕಿಹೊಡೆದು ನಾಲ್ವರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಲಾಯಿಲದ ಪುತ್ರಬೈಲು ಸಮೀಪ ರಿಕ್ಷಾ ಚಾಲಕ ಪ್ರಮೋದ್ ಭೈರ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಿಕ್ಷಾದಲ್ಲಿದ್ದ ಇತರರಾದ ರಾಮಣ್ಣ ಪುತ್ರಬೈಲು, ವಸಂತ ರಾಣಿ, ರಾಮಪ್ಪ ಗಾಂಧೀನಗರ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.