ಮಕ್ಕಳನ್ನು ಭಿಕ್ಷಾಟನೆಗೆ ಇಳಿಸಿ ಹಣ ಮಾಡುವ ಧಂದೆ ಮಂಗಳೂರಿನಲ್ಲಿ ಫುಲ್ ಆಕ್ಟೀವ್ !

ಸಣ್ಣ ಮಕ್ಕಳನ್ನು ಭಿಕ್ಷಾಟನೆಗೆ ಇಳಿಸಿ ಹಣ ಮಾಡುತ್ತಿರುವ ದಂಧೆಯನ್ನು ಪತ್ತೆ ಹಚ್ಚಿರುವ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪೊಳಲಿ ದೇವಸ್ಥಾನದ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿ, ಎರಡು ತಿಂಗಳ ಮಗು ಸೇರಿ ಒಂಬತ್ತು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಎಲ್ಲರೂ ಏಳು ವರ್ಷದೊಳಗಿನ ಮಕ್ಕಳಾಗಿದ್ದು ಈ ಪೈಕಿ ಐದು ಮಂದಿ ಹುಡುಗರಾಗಿದ್ದಾರೆ.

ಮಂಗಳೂರಿನ ರಸ್ತೆಗಳಲ್ಲಿ ಭಿಕ್ಷಾಟನೆ ಮಾಡುತ್ತಾ, ಬಲೂನ್ ಮಾರುತ್ತಾ ಭಿಕ್ಷೆಗೆ ಇಳಿದಿದ್ದ ಮಕ್ಕಳು ನಿನ್ನೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಉತ್ಸವದ ಸಂದರ್ಭದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಈ ವೇಳೆ ಜಿಲ್ಲಾ ಮಕ್ಕಳ ಅಭಿವೃದ್ಧಿ ಸಮಿತಿ ಮತ್ತು ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ.

ಈ ರೀತಿ ಬೀದಿಗೆ ಬಿಟ್ಟ ಮಕ್ಕಳಲ್ಲಿ ಹೆಚ್ಚಿನವರು ರಾಜಸ್ಥಾನ ಮೂಲದವರು. ಮಕ್ಕಳ ಪೋಷಕರನ್ನು ಯಾವುದೇ ಲಾಡ್ಜ್ ನಲ್ಲಿ ಇಡಲಾಗುತ್ತದೆ. ಇಲ್ಲಿ ಮಕ್ಕಳನ್ನು ದುಡಿಸುವ ಏಜಂಟರು ಕೆಲಸ ಮಾಡುತ್ತಾರೆ. ಹತ್ತು ಕುಟುಂಬಗಳ ಎರಡು ಗುಂಪು ಮಂಗಳೂರಿನಲ್ಲಿ ಸಕ್ರಿಯ ಆಗಿದ್ದು, ಈ ಮಕ್ಕಳ ತಾಯಂದಿರು ಕೂಡ ಮೈನರ್ ಆಗಿದ್ದು ಅವರು ಕೂಡ ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡುಬಂದಿದೆ.
ಅಥವಾ ಇಲ್ಲವೇ ಇತರೇ ದಂಧೆಗಳಿಗೆ ಇವರನ್ನು ಬಳಸಿಕೊಳ್ಳಲಾಗುತ್ತದೆ. ವಾರಕ್ಕೊಮ್ಮೆ ಜಾಗ ಬದಲು ಮಾಡುತ್ತಾರೆ. ಒಂದೊಂದು ವಾರ ಒಂದೊಂದು ಕಡೆ ದೇವಸ್ಥಾನ, ಇನ್ನಿತರ ಜನ ಸೇರುವ ಪ್ರದೇಶಗಳಲ್ಲಿ ಮಕ್ಕಳನ್ನು ಬಿಡಲಾಗುತ್ತದೆ. ಸಂಜೆ ಹೊತ್ತಿಗೆ ಲಾಲ್ ಬಾಗಿನ ಪಬ್ಬಾಸ್ ಬಳಿ ಸೇರಿರುತ್ತಾರೆ ಎಂದು ಕಮಿಟಿ ಸದಸ್ಯರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.