ಬೆಳ್ತಂಗಡಿ ಮತ್ತು ಪುತ್ತೂರು ಮುಳಿಯದಲ್ಲಿ ಮುಳಿಯೋತ್ಸವ

ಪುತ್ತೂರು : ಇಲ್ಲಿನ ಸುಪ್ರಸಿದ್ಧ ಚಿನ್ನದ ಮಳಿಗೆ ಮುಳಿಯ ಜ್ಯುವೆಲ್ಸ್‍ನಲ್ಲಿ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳ ಅನೂಹ್ಯ ಸಂಭ್ರಮ ಮುಳಿಯೋತ್ಸವವು ಎಪ್ರಿಲ್ 9 ರಿಂದ ಮೇ 9ರಿಂದ ನಡೆಯಲಿದೆ. ಪ್ರತೀ ವರ್ಷ ಎಪ್ರಿಲ್ ತಿಂಗಳಲ್ಲಿ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವ ಕಾರ್ಯಕ್ರಮವು ನಡೆಯಲ್ಲಿದ್ದು, ಈ ಬಾರಿ ಇದನ್ನು ವಿಭಿನ್ನವಾಗಿ ಮುಳಿಯೋತ್ಸವವಾಗಿ ಆಚರಿಸಲಾಗುತ್ತಿದೆ.

ಈ ಬಾರಿಯ ಮುಳಿಯೋತ್ಸವದಲ್ಲಿ ಗ್ರಾಹಕರಿಗೆ ವಿಶೇಷ ಆಭರಣಗಳ ಅನನ್ಯ ಸಂಗ್ರಹವಿದ್ದು ತಮಗಿಷ್ಟವಾದ ಆಭರಣಗಳ ವಿಪುಲ ಆಯ್ಕೆಗೆ ಅವಕಾಶವಿರುತ್ತದೆ. ಅದಲ್ಲದೆ ಎಪ್ರಿಲ್ 9ರಿಂದ ಮೇ 9ರವರೆಗೆ ಮುಳಿಯೋತ್ಸವ ನಡೆಯಲಿದ್ದು ಅದರಲ್ಲಿ ಎಪ್ರಿಲ್ 9ರಿಂದ 14ರವರೆಗೆ ಆ್ಯಂಟಿಕ್ ಆಭರಣಗಳ ವಿಶೇಷ ಸಂಗ್ರಹವಿರುತ್ತದೆ. ಅದೇ ರೀತಿ ಎಪ್ರಿಲ್ 17ರಿಂದ 21ರವರೆಗೆ ಕರಿಮಣಿ ಆಭರಣಗಳ ಸಂಗ್ರಹವಿರುತ್ತದೆ ಮತ್ತು ಎಪ್ರಿಲ್ 24ರಿಂದ 28ರವರೆಗೆ ಅಮೂಲ್ಯ ಡೈಮಂಡ್ ಆಭರಣಗಳ ಅನನ್ಯ ಸಂಗ್ರಹವಿದ್ದು ಮೇ 1ರಿಂದ 6ರವರೆಗೆ ಬೆಳ್ಳಿ ಆಭರಣಗಳ ವಿಶೇಷ ಸಂಗ್ರಹವಿರುತ್ತದೆ.

ಇದಲ್ಲದೆ 75 ವರ್ಷಾಚರಣೆಯ ಪ್ರಯುಕ್ತ ರೂ. 25,000 ಮೇಲ್ಪಟ್ಟ ಖರೀದಿಗೆ ಉಚಿತ ಕೂಪನ್ ಪಡೆಯುವ ಅವಕಾಶವಿದ್ದು, ಇದರಲ್ಲಿ ಗ್ರಾಹಕರಿಗೆ 375 ಬಹುಮಾನಗಳ 2ನೇ ಹಂತದ ಡ್ರಾ ನಡೆಯಲಿದ್ದು ಇದರಲ್ಲಿ ಕಾರು ಇನ್ನಿತರ ಬಹುಮಾನಗಳನ್ನು ಗೆಲ್ಲುವ ಅವಕಾಶವಿರುತ್ತದೆ. ಗ್ರಾಹಕರು ಇದರ ಅವಕಾಶವನ್ನು ಸದುಪಯೋಗಪಡಿಸಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.