ಶಾಲಾ ಆರಂಭದ ಬಗ್ಗೆ ಗೋಪಾಲಕೃಷ್ಣ ಪಿ. ಎಸ್ ರವರ ಅಭಿಪ್ರಾಯ

ಸಮಸ್ತ ಓದುಗ ಮಿತ್ರರಿಗೆ ನಮಸ್ತೆ.ಕೊರೋನ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾ ಉಂಟು ಹೀಗಿರುವಾಗ‌ ಶಾಲೆ ಆರಂಬಿಸೋದು ಸಮಂಜಸವಲ್ಲ. ಕೊರೊನ ಒಬ್ಬ‌ ವಿಧ್ಯಾರ್ಥಿಗೆ ಬಂದರೆ ಆ ಶಾಲೆಯ ಎಲ್ಲಾ ವಿಧ್ಯಾರ್ಥಿಗಳು ಅವರ ಪೋಷಕರು,ಶಿಕ್ಷಣ ಸಂಸ್ಥೆಯಲ್ಲಿನ ಅಧ್ಯಾಪಕರು,ಅಧ್ಯಾಪಕೇತರರು, ಆಡಳಿತ ಮಂಡಳಿಯವರು ಅವರ ಮನೆಯವರು ಎಲ್ಲರಿಗೂ ಬರುವ ಸಾಧ್ಯತೆ ಅಧಿಕ.ಹೀಗಿರುವಾಗ ಇಡೀ ಸಮಾಜವೇ ವಿಷವರ್ತುಲದಲ್ಲಿ ಸಿಲುಕುತ್ತದೆ ಆದುದರಿಂದ ಈ ಮಹಾಮಾರಿಯು ಕಂಟ್ರೋಲ್ಗೆ ಬಂದ ನಂತರ ಶಾಲೆ ಆರಂಭಿಸಿದರೆ ಭವಿಷ್ಯ ಉಜ್ವಲವಾದೀತು.ಒಂದು ವೇಳೆ ಸರಕಾರ ಆತುರದ ತೀರ್ಮಾನ ತೆಗೆದುಕೊಂಡರೆ ನಮ್ಮ ರಾಜ್ಯದಲ್ಲಿ ಕೊರೊನದಿಂದ ಕನಿಷ್ಫ 1 ಕೋಟಿ ಜನರು ಸಾವನ್ನಪ್ಪುವ ಸಾದ್ಯತೆ ಇದೆ ಯಾಕೆಂದರೆ ಅದೆಷ್ಟೋ ಮನೆಗಳಲ್ಲಿ ವೃದ್ದರು ರೋಗಿಗಳು ಇರುತ್ತಾರೆ ಇವರೆಲ್ಲ ಈ ಕಾಯಿಲೆ ಬಂದರೆ ಚೇತರಿಸಿಕೊಂಡಾರೊ ಚಿಂತಿಸಿ. ತಾವು ವಿಧ್ಯಾರ್ಥಿಗಳ ಪೋಷಕರಾಗಿರುತ್ತೀರಿ ಅಥವಾ ಶುಭಾಕಾಂಕ್ಷಿಗಳಾಗಿರುತ್ತೀರಿ ಆದುದರಿಂದ ಈ ವಿಚಾರವನ್ನು ಗಂಬೀರವಾಗಿ ಪರಿಗಣಿಸಿ ಸರಕಾರಕ್ಕೆ ಮನಗಾಣಿಸ ಬೇಕಾದ ಅನಿವಾರ್ಯತೆ ನಮಗಿದೆ.ನಾವೆಲ್ಲರೂ ಪ್ರತಿರೋದ ವ್ಯಕ್ತಪಡಿಸಿದರೆ ಖಂಡಿತ ಶಾಲೆ ಆರಂಭವಾಗುವುದನ್ನು ಮುಂದೂಡುತ್ತಾರೆ.ಆಗ ನಮ್ಮ ರಾಜ್ಯ ಮಾತ್ರವಲ್ಲ ರಾಷ್ಟ್ರ ಸುರಕ್ಷಿತವಾಗಿರುತ್ತದೆ.

ಬರಹ
ಗೋಪಾಲಕೃಷ್ಣ ಪಿ.ಎಸ್
ಸಾಮಾಜಿಕ ಚಿಂತಕ, ಬೆಳ್ಳಾರೆ

Leave A Reply

Your email address will not be published.