2018 ಮಡಿಕೇರಿಯಲ್ಲಿ ಜಲಪ್ರಳಯದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಮನೆ ಕೀ ಹಸ್ತಾಂತರ

ಮಡಿಕೇರಿ : 2018 ಜಲಪ್ರಳಯದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಕಟ್ಟಿದ ಹೊಸ ಮನೆ ಕೀಯನ್ನು ವಸತಿ ಸಚಿವ ವಿ.ಸೋಮಣ್ಣ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ಹಸ್ತಾಂತರ ಮಾಡಿದರು.

ಮಾದಾಪುರ ಬಳಿಯ ಜಂಬೂರಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಬಡಾವಣೆಯಲ್ಲಿ 383 ಸಂತ್ರಸ್ತರಿಗೆ ಸರ್ಕಾರ ಮನೆ ನೀಡಿದೆ.

ಸಂತ್ರಸ್ತರಾದ 800ಕ್ಕೂ ಅಧಿಕ ಕುಟುಂಬಗಳ ಪೈಕಿ 436 ಕುಟುಂಬಗಳಿಗೆ ಗುರುವಾರ ಮನೆಗಳು ಹಸ್ತಾಂತರವಾಗಿದೆ.

ಮನೆ ಚಾಲನೆಗೆ ಬಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ಎರಡು ವರ್ಷಗಳಿಂದ ಸಂತ್ರಸ್ತ ಕುಟುಂಬಗಳು ಸೂರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಇದೀಗ ತಡವಾಗಿಯಾದರೂ ಮನೆ ಸಿಕ್ಕಿದ್ದಕ್ಕೆ ಸಂತ್ರಸ್ತರ ಮೊಗದಲ್ಲಿ ಹರ್ಷ ಮೂಡಿದೆ.

Leave A Reply

Your email address will not be published.