ತಿರುಪತಿ ದೇವಸ್ಥಾನಕ್ಕೆ ಜೂನ್ 8 ರ ನಂತರ ಭಕ್ತರಿಗೆ ಪ್ರವೇಶಾವಕಾಶ | ಪೂರ್ವಭಾವಿಯಾಗಿ ‘ ಟ್ರಯಲ್’ ದರ್ಶನಕ್ಕೆ ನಿರ್ಧಾರ
ಅಮರಾವತಿ, ಜೂನ್ 3, ತಿರುಪತಿ ದೇವಸ್ಥಾನಕ್ಕೆ ಜೂನ್ 8 ರ ನಂತರ ಭಕ್ತರಿಗೆ ಪ್ರವೇಶಾವಕಾಶಕ್ಕೆ ಸರ್ಕಾರ ನಿರ್ಧರಿಸಿದೆ.
ಪೂರ್ವಭಾವಿಯಾಗಿ ಜೂನ್ 5 ರಿಂದ ಪ್ರಯೋಗಾರ್ಥ ದರ್ಶನ ಪ್ರಕ್ರಿಯೆ ನಡೆಸುವುದಾಗಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಪ್ರಕಟನೆ ತಿಳಿಸಿದೆ.
ಮೊದಲು ಚಿತ್ತೂರು ಜಿಲ್ಲೆಯ ಭಕ್ತರಿಗೆ ದೇವರ ದರ್ಶನಕ್ಕೆ ಮಾಡಲು ಅವಕಾಶ ನೀಡಲಾಗುವುದು. ನಂತರ ಉಳಿದ ಭಕ್ತರಿಗೆ ಅವಕಾಶವಿದೆ.
ದಿನವೊಂದರಲ್ಲಿ ದೇವರ ದರ್ಶನ ಪಡೆಯುವ ಭಕ್ತರ ಸಂಖ್ಯೆಯಲ್ಲಿ ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಲ್ ತಿಳಿಸಿದ್ದಾರೆ. ತಿರುಪತಿಯಲ್ಲಿ ದಿನವೊಂದಕ್ಕೆ ಒಂದು ಲಕ್ಷದಷ್ಟು ಮಂದಿ ಭಕ್ತರು ಆಗಮಿಸುತ್ತಾರೆ. ತಿಮ್ಮಪ್ಪನ ತಿಂಗಳ ಮುಖ್ಯ ಆದಾಯ ಹುಂಡಿಗೆ ಬೀಳುವ ದುಡ್ಡು ಮತ್ತು ಇತರ ಒಡವೆಗಳು. ಅದು ಬರೋಬ್ಬರಿ ತಿಂಗಳಿಂದಕ್ಕೆ 200 ಕೋಟಿಯಷ್ಟು ಆಗುತ್ತದೆ. ಕಳೆದ ಮಾರ್ಚ್ 19 ರಿಂದ ತಿರುಪತಿ ದೇವಾಲಯ ಜನರ ದರ್ಶನಕ್ಕೆ ಮುಚ್ಚಿದ್ದು, ಸರ್ಕಾರಕ್ಕೆ ಸುಮಾರು 600 ಕೋಟಿಯಷ್ಟು ನಷ್ಟ ಆಗಿದೆ.