ಪಂಪ್ ವೆಲ್ ಫ್ಲೈ ಓವರ್ ಇನ್ನು ಸಾವರ್ಕರ್ ಫ್ಲೈ ಓವರ್ ? | ಸಾವರ್ಕರ್ ಬ್ಯಾನರ್ ಅಲ್ಲಿ ಪ್ರತ್ಯಕ್ಷ

ಮಂಗಳೂರು : ರಾಜ್ಯದಲ್ಲಿ ಈಗಾಗಲೇ ಸಾವರ್ಕರ ಪಾಲಿಟಿಕ್ಸ್ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಮಂಗಳೂರಿನಲ್ಲೂ ಇದರ ಬಗ್ಗೆ ಘಟನೆಯೊಂದು ವರದಿಯಾಗಿದೆ.

ಪಂಪ್ ವೆಲ್ ಸೇತುವೆಗೆ ಸಡನ್ ಆಗಿ ಬ್ಯಾನರ್ ಮೂಲಕ ಯಾರೋ ವೀರ ಸಾವರ್ಕರ್ ಹೆಸರನ್ನಿರುವ ಬ್ಯಾನರ್ ಅಂಟಿಸಿ ಸಾಮಾಜಿಕ ಹರಿಬಿಡಲಾಗಿದ್ದು ಇದೀಗ ಅದು ಚರ್ಚೆಗೆ ಕಾರಣವಾಗಿದೆ.
ಮೊನ್ನೆ ಬೆಂಗಳೂರಿನ ಯಲಹಂಕದ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ನಾಮಕರಣ ಮಾಡಲು ಸರಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈ ಬಿಡಲಾಯಿತು. ಆದರೆ ಶ್ರೀ ರಾಮಸೇನೆಯ ಅಧ್ಯಕ್ಷರಾದ ಪ್ರಸಾದ್ ಅತ್ತಾವರ ಅವರ ನೇತೃತ್ವದ ಶ್ರಿ ರಾಮ್ ಸೇನೆ ಕಾರ್ಯಕರ್ತರು ಅದನ್ನು ಉದ್ಘಾಟಿಸಿದ್ದರು.

ಈ ಘಟನೆಯ ಬೆನ್ನಲ್ಲೇ ಸಾವರ್ಕರ ಅವರ ಹೆಸರನ್ನು ಪಂಪ್ ವೆಲ್ ಗೆ ಇರಿಸಲಾಗಿದೆ.

ರಾಜ್ಯದ ರಾಜಕೀಯ ರಂಗದಲ್ಲಿ ಅಸ್ತಿತ್ವದಲ್ಲಿರುವ ಸಾವರ್ಕರ್ ಕುರಿತ ಚರ್ಚೆಗೆ ಇದು ಇನ್ನಷ್ಟು ಹೆಚ್ಚಿನ ‌ಕುತೂಹಲ ಮೂಡಿಸಿದೆ.

Leave A Reply

Your email address will not be published.