ಕರ್ನಾಟಕ – ಕೇರಳ ಅಂತರ್ ರಾಜ್ಯ ಸಂಚಾರಕ್ಕೆ ಕಟ್ಟು ನಿಟ್ಟಿನ ನಿಯಮಗಳೊಂದಿಗೆ ಅನುಮತಿ
ಕಾಸರಗೋಡು: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂತರ್ರಾಜ್ಯ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದರ ಸಡಿಲಿಕೆಯ ಕುರಿತಾಗಿ ಕಾಸರಗೋಡಿನ ಜಿಲ್ಲಾಧಿಕಾರಿಯವರು ಇಂದಿನಿಂದ ಅಂತರ್ ರಾಜ್ಯ ಸಂಚಾರಕ್ಕೆ ಸಂಬಂಧಿಸಿದಂತೆ ಕೆಲವು ಆದೇಶ ಹೊರಡಿಸಿದ್ದಾರೆ. ಕೆಳಗಿನ ಎಲ್ಲಾ ನಿಯಮಗಳು ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂಚರಿಸುವಾಗ ಕಡ್ಡಾಯವಾಗಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಆದೇಶಗಳು :
- ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸಲು ಬಯಸುವ ವ್ಯಕ್ತಿಗಳು ಕೋವಿಡ್-19 ಜಾಗೃತಾ ಪೋರ್ಟಲ್ ನಲ್ಲಿ EMERGENCY Pass ಗಾಗಿ ನೋಂದಾವಣೆ ನಡೆಸಬೇಕಾಗಿದೆ, ಮತ್ತು ಅದಕ್ಕೆ INTERSTATE TRAVEL ON DAILY BASIS ಎಂಬ ಕಾರಣವನ್ನು ನಮೂದಿಸಬೇಕಾಗಿದೆ. ಅಲ್ಲಿಂದ ಪಾಸ್ ಪಡೆಯಬೇಕಾಗಿದೆ.
- ಈ ಪಾಸ್ ಗಳಿಗೆ 28 ದಿವಸಗಳ ಅವಧಿ ಇರುತ್ತವೆ.
- ವ್ಯಕ್ತಿಯ ಹೆಸರು, ವಿಳಾಸ, ಫೋನ್ ನಂಬರ್, ಪ್ರವೇಶಿಸುವ ದಿನಾಂಕ, ಮರಳಿ ಹೋಗುವ ದಿನಾಂಕ ಇತ್ಯಾದಿ ಇಲ್ಲಿ ಸಮರ್ಪಿಸಬೇಕಿದೆ.
- ಈ ಆನ್ಲೈನ್ ಅರ್ಜಿ ಲಭಿಸಿದ ಒಂದು ಗಂಟೆಯೊಳಗಾಗಿ Additional District Magistrate ಕಾಸರಗೋಡು ಅಥವಾ DIVISIONAL MAGISTRATE ಕಾಞಂಗಾಡ್, ಇವರು ಪಾಸ್ ಗಳನ್ನು ವಿತರಿಸಲು ಆದೇಶ ನೀಡಲಿರುವರು.
- ಈ ಪಾಸ್ ಗಳನ್ನು ವಿತರಿಸುವ ವೇಳೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಕಾಸರಗೋಡು/ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಕಾಞಂಗಾಡ್ ರವರು Comply with the direction in the order of the DISTRICT COLLECTOR dated on 02-06-2020 vide order No 1331/2020/KL ಎಂದು ನಮೂದಿಸಬೇಕಾಗಿದೆ.
ಈ ಪಾಸ್ ಒದಗಿಸಿದ ಬಳಿಕ , ಪಾಸ್ ನ ಸಮಗ್ರ ಮಾಹಿತಿಗಳನ್ನು ಚೆಕ್ ಪೋಸ್ಟ್ ಸಮೀಪ ಕ್ಯಾಂಪ್ ನಡೆಸುತ್ತಿರುವ ಮಂಜೇಶ್ವರ ತಹಶೀಲ್ದಾರ್ ರವರ ಸಮಕ್ಷಮ ನೀಡಬೇಕಿದೆ. - ಪಾಸ್ ಲಭಿಸಿದ ಕೂಡಲೇ ನಿತ್ಯ ಪ್ರಯಾಣಿಕರು ತಲಪಾಡಿ ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ ಹಾಜರಾಗಿ, ಅಲ್ಲಿರುವ ವೈದ್ಯಕೀಯ ತಂಡದ ಕೋವಿಡ್19 ಪರಿಶೋಧನೆಗೆ ಒಳಪಡಬೇಕಿದೆ.ಥರ್ಮಲ್ ಸ್ಕ್ಯಾನರ್ ಮುಂತಾದ ಪರಿಶೋಧನಾ ಉಪಕರಣಗಳ ಮೂಲಕ ಜ್ವರ ಇತ್ಯಾದಿ ಕೋವಿಡ್ ಲಕ್ಷಣಗಳ ಪ್ರಾಥಮಿಕ ಪರೀಕ್ಷೆ ಅಲ್ಲಿ ನಡೆಯಲಿದೆ. ಈ ಕೌಂಟರ್ ಬಳಿ ಇರುವ ಇನ್ನೊಂದು ಕೌಂಟರ್ ನಲ್ಲಿ ಪ್ರಯಾಣಿಕರು ಪ್ರವೇಶಿಸುವಾಗ ಮತ್ತು ಮರಳುವಾಗ ದಿನಾಂಕ ನಮೂದಿಸಿ ಸಹಿ ಹಾಕಬೇಕಿದೆ.
- ರಿಜಿಸ್ಟರ್ ನಲ್ಲಿ ಅನುಕ್ರಮವಾಗಿ ಪಾಸ್ ನಂಬರ್ ನಮೂದಿಸಬೇಕಾಗಿದೆ.
You really make it seem so easy along with your presentation but I to find this topic
to be actually one thing which I feel I would by no means understand.
It kind of feels too complicated and very huge for me.
I am looking forward to your next post, I will attempt
to get the hold of it! Najlepsze escape roomy
Very interesting subject, appreciate it for putting up.!