ಉಡುಪಿಯ ಕೋರೋನಾ ಮಹಾಸ್ಫೋಟದ 5 ಜನ ಸೋಂಕಿತರು ಫೋನ್ ಸ್ವಿಚ್ ಆಫ್ ಮಾಡಿ ಸಂಪರ್ಕಕ್ಕೆ ಸಿಗುತ್ತಿಲ್ಲ !
ಉಡುಪಿ ಜಿಲ್ಲೆಯಲ್ಲಿ ಕೋರೋನಾ ಮಹಾಸ್ಫೋಟ ಸಂಭವಿಸಿರುವುದು ಎಲ್ಲರಿಗೂ ತಿಳಿದೇ ಇದೆ. ನಿನ್ನೆ ಒಂದೇ ದಿನ 73 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯ ಕೊರೊನಾ ಪೀಡಿತರ ಸಂಖ್ಯೆ 260 ಕ್ಕೆ ಏರಿಕೆಯಾಗಿದೆ.
ಈಗ ಉಡುಪಿ ಜಿಲ್ಲೆಯಲ್ಲಿ ಸೊಂಕಿತರಾಗಿರುವ ಒಟ್ಟು 73 ಸೋಂಕಿತರ ಪೈಕಿ 68 ಜನರನ್ನು ಪತ್ತೆ ಮಾಡಲಾಗಿ ಕ್ವಾರಂಟೈ ನ್ಗೆ ಒಳಪಡಿಸಲಾಗಿದೆ. ಆದರೆ ಐವರು
ಫೋನ್ ಸ್ವಿಚ್ ಆಫ್ ಮಾಡಿ ಕೂತಿದ್ದಾರೆ. ಇದು ಜಿಲ್ಲಾಡಳಿತಕ್ಕೆ ಭಯ ಮತ್ತು ಆತಂಕಕ್ಕೆ ಕಾರಣವಾಗಿದೆ. ಫೋನ್ ಸ್ವಿಚ್ ಆಫ್ ಮಾಡಿದ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತೊಡಗಿದೆ.
ಸೋಂಕಿತರ ಪೈಕಿ 61 ಜನ ಮಹಾರಾಷ್ಟ್ರದಿಂದ ಬಂದವರು. ಮೂವರು ಅನಿವಾಸಿ ಭಾರತೀಯರು. ಜಿಲ್ಲೆಯ ನಾಲ್ಕು ಮಂದಿ ಪೊಲೀಸರಲ್ಲಿ ಕೂಡಾ ಸೋಂಕು ಕಾಣಿಸಿಕೊಂಡಿರುವುದು ಕೂಡ ಆತಂಕದ ವಿಚಾರ. ಸೋಂಕಿತರ ಪೈಕಿ ಗರ್ಭಿಣಿ, ಮಕ್ಕಳು ಮತ್ತು ರೋಗ ಲಕ್ಷಣ ಇರುವ ಹಿರಿಯರನ್ನು ಉಡುಪಿಯ ಟಿಎಂಎ ಪೈ ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಶಂಕರ ನಾರಾಯಣ ಪೊಲೀಸ್ ಠಾಣೆ, ಉಡುಪಿ ಡಿಎಆರ್ ಪೊಲೀಸರು ಕೆಲಸ ಮಾಡಿದ ಸ್ಥಳಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಉಡುಪಿ ಎಸ್.ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.