ಪುತ್ತೂರು | ಕೆಮ್ಮಾಯಿಯಲ್ಲಿ ಅಡಿಕೆಗೆ ಮದ್ದು ಸಿಂಪಡಿಸುವಾಗ ಅಡಿಕೆ ಮರದಿಂದ ಬಿದ್ದು ಸಾವು

ಪುತ್ತೂರು: ಜೂನ್ 2, ಔಷಧಿ ಸಂಪಡಿಸುವ ವೇಳೆ ಅಡಿಕೆ ಮರದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಜೂ.2ರಂದು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಸಮೀಪದಲ್ಲಿ ನಡೆದಿದೆ.

ಬನ್ನೂರು ಗ್ರಾಮದ ನಿವಾಸಿ ನೀರ್ಪಾಜೆ ದಿ.ಮಾಣಿ ಎಂಬವರ ಪುತ್ರ ಉಮೇಶ್(37ವ)ರವರು ಇಂದು ಅಡಿಕೆ ಮರದಿಂದ ಆಕಸ್ಮಿಕವಾಗಿ ಬಿದ್ದು ಉಸಿರು ಚೆಲ್ಲಿದ್ದಾರೆ. ಇವರು ಬನ್ನೂರು, ಕೆಮ್ಮಾಯಿ ಪರಿಸರದ ಆಸುಪಾಸಿನಲ್ಲಿ ಅಡಿಕೆ ತೆಗೆಯುವುದು, ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುವುದು, ತೆಂಗಿನ ಕಾಯಿ ಕೀಳುವ ಕಾಯಕದಲ್ಲೇ ನಿರತರಾಗಿದ್ದ ಉಮೇಶ್ ಎಂದಿನಂತೆ ಅವರು ಜೂ. 2ರಂದು ಕೆಮ್ಮಾಯಿ ಪೊಸಳಿಕೆ ಎಂಬಲ್ಲಿ ಅಡಿಕೆ ತೋಟದಲ್ಲಿ ಅಡಿಕೆ ಮರಗಳಿಗೆ ಔಷಧಿ ಸಿಂಪಡಣೆ ಮಾಡುವ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಅಡಿಕೆ ಮರದಿಂದ ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದರು.

ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಆಗಲೇ ಅವರ ಪ್ರಾಣ ಪಕ್ಷಿ ಹಾರಿಹೊಗಿತ್ತು. ಮೃತರ ಪತ್ನಿ ಅನಿತಾ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತರು ಪತ್ನಿ ಅನಿತಾ, ಮಕ್ಕಳು ಹಾಗೂ ಸಹೋದರರನ್ನು ಅಗಲಿದ್ದಾರೆ.

Leave A Reply

Your email address will not be published.