ದೇರಳಕಟ್ಟೆಯ ಬಿಎಸ್ಸೆನ್ನೆಲ್ ಸರ್ವರ್ ರೂಂ ನಲ್ಲಿ ಬೆಂಕಿ : ಲಕ್ಷಾಂತರ ರೂ. ನಷ್ಟ

ಮಂಗಳೂರು, ಜೂ.2 : ಮಂಗಳೂರಿನ ದೇರಳಕಟ್ಟೆ ಬಿಎಸ್ಸೆನ್ನೆಲ್ ಉಪ ಕೇಂದ್ರದ ಪ್ರಮುಖ ಸರ್ವರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಿದ್ದು, ಸುತ್ತ ಮುತ್ತ ಹೊಗೆಯ ತುಂಬಿಕೊಂಡಿದೆ.

ಸರ್ವರ್ ರೂಂನಲ್ಲಿ ಕೂಲಿಂಗ್ ವ್ಯವಸ್ಥೆಯ ತಾಂತ್ರಿಕ ಸಮಸ್ಯೆಯಿಂದ ಶಾಖ ಹೆಚ್ಚಾಗಿ ಬೆಂಕಿ ಉತ್ಪತ್ತಿಯಾಗಿರುವ ಕುರಿತು ಸಂಶಯಿಸಲಾಗಿದೆ. ಈ ಅವಘಡದಿಂದಾಗಿ ಸುಮಾರು 4-5 ಲಕ್ಷ ರೂ. ನಷ್ಟ ಆಗಬಹುದೆಂದು ಅಂದಾಜಿಸಲಾಗಿದೆ.

ಈ ಅವಘಡದಿಂದ ಸ್ಥಳೀಯ ಬ್ಯಾಂಕ್, ಆಸ್ಪತ್ರೆಗಳ ಸರ್ವರ್, ಇಂಟರ್ ನೆಟ್ ಸೇರಿದಂತೆ ಸ್ಥಿರ ದೂರವಾಣಿ ಕೂಡಾ ಸ್ಥಗಿತಗೊಂಡಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.