ಐವರ್ನಾಡು | ಪೋಸ್ಟ್‌ ಮ್ಯಾನ್ ಗೆ ಕೊರೋನಾ ನೆಗೆಟಿವ್

ಐವರ್ನಾಡು : ಐವರ್ನಾಡಿನ ಪೋಸ್ಟ್ ಮ್ಯಾನ್ ಹೋಂ ಕಾರಂಟೈನ್ ನಲ್ಲಿ ಇದ್ದು, ಇಂದು ಅವರ ಕೊರೋನಾ ವರದಿ ನೆಗೆಟಿವ್ ಬಂದಿದೆ.

ಬೆಳ್ಳಾರೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ದರ್ಖಾಸ್ತಿನ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಐವರ್ನಾಡಿನ ಪೋಸ್ಟ್ ಮ್ಯಾನ್ ಗೆ ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿತ್ತು.

ಆ ಭಾಗಕ್ಕೆ ಪೋಸ್ಟ್ ಮ್ಯಾನ್ ಕರ್ತವ್ಯಕ್ಕೆ ಹೋಗಿದ್ದಾರೆ ಎಂಬ ಹಿನ್ನೆಲೆಯಲ್ಲಿ‌ ಅವರನ್ನು‌ ಕ್ವಾರಂಟೇನ್ ನಲ್ಲಿರಲು ಸೂಚಿಸಲಾಗಿದ್ದು ಮೇ.29 ರಂದು ಅವರ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು ಇಂದು ಅವರ ಪರೀಕ್ಷಾ ವರದಿ ಬಂದಿದ್ದು ಅವರಿಗೆ ನೆಗೆಟಿವ್ ಬಂದಿದೆ.

Leave A Reply

Your email address will not be published.