ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನಂತಪದ್ಮನಾಭ ಏರ್ಕಡಿತ್ತಾಯ ನಿಧನ

ಪುತ್ತೂರಿನ ಕೊಡಿಪ್ಪಾಡಿಯವರಾದ ಪ್ರಸ್ತುತ ಉಜಿರೆ ಶಿವಾಜಿನಗರ ನಿವಾಸಿ, ನಿವೃತ್ತ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಅನಂತಪದ್ಮನಾಭ ಏರ್ಕಡಿತ್ತಾಯ ಅವರು ತಮ್ಮ 76 ನೆಯ ವಯಸ್ಸಿನಲ್ಲಿ ಹೃದಹೃದಾಯಾಘಾತದಿಂದ ಇಂದು ತಮ್ಮ ಸ್ವಗೃಹದಲ್ಲ ನಿಧನರಾದರು.

ಅವರು ಪತ್ನಿ ಉಷಾ, ಪುತ್ರ ಗುರುದೇವ, ಪುತ್ರಿ ರಶ್ಮಿ ಮೊಮ್ಮಕ್ಕಳು ಮತ್ತು ಕುಟುಂಬ ವರ್ಗವನ್ನು ಅಗಲಿದ್ದಾರೆ. ಅವರು ಕರ್ನಾಟಕ ಬ್ಯಾಂಕಿನಲ್ಲಿ ಶಿರಸಿ ಹಾಸನ ಬೆಂಗಳೂರು ಮುಂತಾದ ಕಡೆಗಳಲ್ಲಿ ಸೇವೆ ಪ್ರಬಂಧಕರಾಗಿ ಉಜಿರೆ ಶಾಖೆಯಲ್ಲಿ ನಿವೃತ್ತರಾಗಿದ್ದರು. ಅವರು ಸರಳ ಸಾತ್ವಿಕ ಸ್ವಭಾವದವರಾಗಿ ಧಾರ್ಮಿಕತೆಯಲ್ಲಿ ವಿಶೇಷ ಶ್ರದ್ಧೆ ಉಳ್ಳವರಾಗಿದ್ದರು.

Leave A Reply

Your email address will not be published.