ಬಾಡಿದ ಮೊಗದಲ್ಲಿ ನಗು ಅರಳಿಸಿ ಹುಟ್ಟು ಹಬ್ಬ ಆಚರಣೆ

ಬೆಳ್ತಂಗಡಿ: ಮಗನ ಹುಟ್ಟುಹಬ್ಬವನ್ನು ಅಪಘಾತ ಹಾಗೂ ಅಕಸ್ಮಿಕ ಘಟನೆಗಳಿಂದ ತೊಂದರೆಗೊಳಗಾದ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ಹಾಗೂ ಧನಸಹಾಯ ನೀಡುವ ಮೂಲಕ ಆಚರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ತಾಲೂಕಿನ ಜಶನ್ ಗೃೂಪ್ಸ್ ಮಾಲೀಕರು ಯುವವಾಹಿನಿ(ರಿ.)ಬೆಳ್ತಂಗಡಿ ಘಟಕದ ಸಲಹೆಗಾರರಾದ
ಪ್ರಶಾಂತ್ ಕೋಟ್ಯಾನ್ ಇವರು ತಮ್ಮ ಮಗ ಜಶನ್ ನ ಏಳನೇ ವರ್ಷದ ಹುಟ್ಟು ಹಬ್ಬವನ್ನು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶಿರ್ಲಾಲು ಗ್ರಾಮದ ಗರಡಿ ಬಳಿಯ ನಿವಾಸಿ ಪ್ರಸ್ತುತ ಬೆಳ್ತಂಗಡಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸತೀಶ್ ಇವರ ಕುಟುಂಬಕ್ಕೆ ಹಾಗೂ ಮೂಂಡುರು ಗ್ರಾಮದ ಹಿಮರಡ್ಡ ಶ್ರೀಮತಿ ರೇವತಿ ಯವರ ಮನೆಗೆ ಮತ್ತು ಕಲ್ಲಂಡ ಮನೆಯ ವಸಂತ ಪೂಜಾರಿ ಯವರ ಮನೆಗೆ ಹಾಗೂ ಕಲ್ಮಂಜ ಅಕ್ಷಯ ನಗರ ನಿವಾಸಿ ರಾಜು ಪೂಜಾರಿ ಹಾಗು ಬೆಳ್ತಂಗಡಿ ಹುಣ್ಸೆಕಟ್ಟೆ ನಿವಾಸಿ ಕುಸುಮಾವತಿ ಇವರ ಮನೆಗೆ ತೆರಳಿ ದಿನಸಿ ಸಾಮಾಗ್ರಿಗಳು ಮತ್ತು ಧನಸಹಾಯ ಸಹಾಯ ನೀಡಿ ತನ್ನ ಮಗನ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.


Ad Widget

ಈ ಸಂದರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಸಂಘಟನ ಕಾರ್ಯದರ್ಶಿ ಕರುಣಾಕರ ಬೆಳ್ತಂಗಡಿ ನಿರಂಜನ್ ಕಡಂಬು ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ ಪ್ರಶಾಂತ್ ಮಚ್ಚಿನ ಹಾಗೂ ಬೋಜ ಪೂಜಾರಿ ಮಜಲು ಉಪಸ್ಥಿತರಿದ್ದರು.

Ad Widget

Ad Widget

Ad Widget
error: Content is protected !!
Scroll to Top
%d bloggers like this: