ಕನಕಮಜಲು ಯುವಕಮಂಡಲ ವತಿಯಿಂದ ದಿ.ಅಶ್ವಿತ್ ಮಳಿ ರವರ ಶ್ರದ್ಧಾಂಜಲಿ ಸಭೆ

ಮೇ 9 ರಂದು ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಅಡ್ಕಾರಿನ ಪಯಸ್ವಿನಿ ನದಿಯಲ್ಲಿ ಬಲಿಯಾದ ಕನಕಮಜಲಿನ ಅಶ್ವಿತ್ ಇವರ ಶ್ರದ್ಧಾಂಜಲಿ ಸಭೆಯು ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕಮಂಡಲ ಇದರ ವತಿಯಿಂದ ಮೇ 31 ರಂದು ನಡೆಯಿತು.

ಈ ಸಂದರ್ಭದಲ್ಲಿ ಯುವಜನ ವಿಕಾಸ ಕೇಂದ್ರ ಯುವಕಮಂಡಲದ ಪೂರ್ವ ಅಧ್ಯಕ್ಷರಾದ ದಾಮೋದರ ಕನಕಮಜಲು ಮಾತನಾಡಿ ಮೃತ ವ್ಯಕ್ತಿಯು ಕನಕಮಜಲಿನ ಯುವಕ ಮಂಡಲದ ಸಕ್ರಿಯ ಸದಸ್ಯನಾಗಿದ್ದು, ಎಲ್ಲರೊಡನೆ ಪ್ರೀತಿಯಿಂದ ಹೊಂದಿಕೊಳ್ಳುವ ವ್ಯಕ್ತಿತ್ವದವನಾಗಿದ್ದ. ಅದೇರೀತಿ ಈತನು ಮುಂದೊಂದು ದಿನ ಎತ್ತರಕ್ಕೆ ಬೆಳೆಯುತ್ತಿದ್ದ. ಎಲ್ಲರಿಗೂ ಹುಟ್ಟು ಸಾವು ಸಹಜ. ಆದರೆ ಇಂತಹ ಯುವ ಪ್ರತಿಭೆಗಳಿಗೆ ಇಷ್ಟು ಬೇಗ ನಮ್ಮನ್ನು ಅಗಲಿರುವುದು ವಿಧಿಯ ಆಟವೇ ಸರಿ. ಈತನು ಇಂದು ನಮ್ಮೊಂದಿಗೆ ಇಲ್ಲ ಎಂಬ ಸುದ್ದಿಯನ್ನು ನಂಬಲು ಕಷ್ಟವಾಗುತ್ತಿದೆ. ಅಶ್ವಿತ್ ನ ಅಗಲಿವಿಕೆಯು ಯುವಕ ಮಂಡಲಕ್ಕೆ ಹಾಗೂ ಕನಕಮಜಲು ಗ್ರಾಮಕ್ಕೆ ತುಂಬಲಾರದ ನಷ್ಟ ಎಂದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಜಯಪ್ರಸಾದ್ ಕಾರಿಂಜ ಹಾಗೆಯೇ ಉಪಾಧ್ಯಕ್ಷರಾದ ಬಾಲಚಂದ್ರ ನೆಡಿಲು , ಅದೇ ರೀತಿ ಯುವಕ ಮಂಡಲದ ಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

Leave A Reply

Your email address will not be published.